Advertisement

ಉರುಮಾರಮ್ಮ ದೇಗುಲ ಹುಂಡಿ ಹಣ ಕಳವು

03:59 PM May 08, 2022 | Team Udayavani |

ಮಂಡ್ಯ: ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಊರಮಾರಮ್ಮ ದೇಗುಲ ಹುಂಡಿ ಹಣ ದೋಚಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Advertisement

ಎರಡು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದ್ದ ಪುರಾತನ ದೇವಾಲಯ ಗ್ರಾಮದ ಹೊರವಲಯದಲ್ಲಿತ್ತು. 100 ವರ್ಷ ನಂತರ ಕಳೆದ ಏಪ್ರಿಲ್‌ನಲ್ಲಿ ಕೊಂಡ – ಬಂಡಿ ಉತ್ಸವ ಸೇರಿ ಹಲವು ಧಾರ್ಮಿಕ ಕಾರ್ಯಗಳು ನೆರವೇರಿದ್ದವು. ಕಳೆದ ತಿಂಗಳು ಜರುಗಿದ ಧಾರ್ಮಿಕ ಕಾರ್ಯದಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿ, ಲಕ್ಷಾಂತರ ರೂ. ನಗದು, ಆಭರಣ ಕಾಣಿಕೆಯಾಗಿ ಅರ್ಪಿಸಿದ್ದರು. ಇನ್ನೂ ಹುಂಡಿ ಹಣ ಎಣಿಕೆ ಮಾಡಿರಲಿಲ್ಲ.

ಇದನ್ನು ಮನಗಂಡಿರುವ ದುಷ್ಕರ್ಮಿಗಳು, ಶುಕ್ರವಾರ ರಾತ್ರಿ ದೇವಾಲಯದ ಕಬ್ಬಿಣದ ಗ್ರಿಲ್‌ ಮುರಿದು ಎರಡು ಹುಂಡಿ ಒಡೆದು ಅದರಲ್ಲಿದ್ದ ಹಣ, ಆಭರಣ ದೋಚಿ ಪರಾರಿ ಆಗಿದ್ದಾರೆ.

ಈ ಸಂಬಂಧ ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಸಿಪಿಐ ಸಿದ್ದಪ್ಪ, ಪಿಎಸ್‌ಐಗಳಾದ ರವಿಕುಮಾರ್‌, ಸುನೀತಾ, ಪೇದೆಗಳಾದ ರಾಜೇಂದ್ರ, ಚಿಕ್ಕಯ್ಯ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next