Advertisement

ತೆಲಂಗಾಣ ಸಿಎಂ ಭಾವಚಿತ್ರಕ್ಕೆ ಚಪ್ಪಲಿ ಏಟು

05:35 PM Sep 15, 2021 | Team Udayavani |

ವಾಡಿ (ಚಿತ್ತಾಪುರ): ತೆಲಂಗಾಣ ರಾಜ್ಯದಲ್ಲಿ ಆರು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ ಬಂಜಾರಾ ಗೋರ್ ಸೇನಾ ಮುಖಂಡರು ಬುಧವಾರ ಸಂಜೆ ವಾಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ  ಅಂಬೇಡ್ಕರ್ ವೃತ್ತದಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಭಾವಚಿತ್ರವನ್ನು  ರಸ್ತೆಗೆ ಎಸೆದು ಚಪ್ಪಲಿ ಸೇವೆ ಮಾಡಿದ ಪ್ರತಿಭಟನಾಕಾರರು, ಬೆಂಕಿ ಹಚ್ಚಿ ದಹಿಸುವ ಮೂಲಕ ಆಕ್ರೋಶ ಹೊರಹಾಕಿದರು.

ಬಾಲಕಿಯ ಮೇಲೆ ಅಮಾನವೀಯವಾಗಿ ವರ್ತಿಸಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಬಂಜಾರಾ ಜನಾಂಗದ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು. ತೆಲಂಗಾಣ ಸಿಎಂ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:23 ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಸಿದ್ಧತೆ

ಗೋರ್ ಸೇನಾ ಅಧ್ಯಕ್ಷ ರವಿ ಕಾರಬಾರಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ನಿವೇದಿತಾ ದಹಿಹಂಡೆ, ಮಖಂಡರಾದ ವಿಠ್ಠಲ ನಾಯಕ, ಬಾಬುಮಿಯ್ಯಾ, ಹಣಮಂತ ಚವ್ಹಾಣ, ರಾಹುಲ ಸಿಂಧಗಿ, ವೀರಣ್ಣ ಯಾರಿ, ಲೋಕೇಶ ರಾಠೋಡ, ಕಿಶನ ಜಾಧವ, ಗಿರಿಮಲ್ಲಪ್ಪ ಕಟ್ಟಿಮನಿ, ಅಂಬಾದಾಸ ಜಾಧವ,ಅಶೋಕ ಪವಾರ,  ಜಗತ್ ಸಿಂಗ್ ರಾಠೋಡ ಸೇರಿದಂತೆ ನೂರಾರು ಜನ ಬಂಜಾರಾ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next