Advertisement

ಸೇತುವೆ ಮೇಲೆ ಉಕ್ಕಿದ ನೀರು: ಜನ ಜೀವನ ಅಸ್ತವ್ಯಸ್ತ

08:37 PM Jul 25, 2021 | Adarsha |

ಸೊರಬ: ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿದ್ದ ಮಳೆ ಭಾನುವಾರ ಬಿಡುವು ನೀಡಿದ್ದರೂ ಸಹ ಮಳೆಯಿಂದ ಉಂಟಾದ ನೆರೆ ಇನ್ನೂ ತಗ್ಗದ ಪರಿಣಾಮ ರಸ್ತೆಗಳು, ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳಿಲ್ಲ.

Advertisement

ವರದಾ ಹಾಗೂ ದಂಡಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಆನವಟ್ಟಿ-ಜಡೆ ಮಾರ್ಗದ ಬಂಕಸಾಣ ಸೇತುವೆ ಮೇಲೆ ಏಳೆಂಟು ಅಡಿ ನೀರು ಹರಿಯುತ್ತಿದೆ. ಪರಿಣಾಮ ಆನವಟ್ಟಿ-ಜಡೆ ಸಂಚಾರ ಬಂದ್ ಆಗಿದೆ. ಸಂಚಾರ ವ್ಯವಸ್ಥೆಗೆ ತೊಡಕಾಗಿದ್ದ ಸೊರಬ-ಚಂದ್ರಗುತ್ತಿ, ಸೊರಬ-ಆನವಟ್ಟಿ, ಚಂದ್ರಗುತ್ತಿ-ಸಿದ್ದಾಪುರ ರಸ್ತೆಗಳಲ್ಲಿ ನೀರಿನ ಪ್ರಮಾಣ ಕೊಂಚ ಇಳಿಮುಖವಾಗಿದ್ದು, ವಾಹನಗಳ ಸಂಚಾರ ಆರಂಭವಾಗಿದೆ.

ತಾಲೂಕಿನ ವರದಾ ನದಿ ಪಾತ್ರದ ಗೋಂದಿ, ಶಕುನವಳ್ಳಿ, ತುಮರಿಕೊಪ್ಪ, ಕೆರೆಹಳ್ಳಿ, ಬೆನ್ನೂರು, ಕಾತುವಳ್ಳಿ, ಬಾಡದಬೈಲು, ಕಡಸೂರು, ತಟ್ಟಿಕೆರೆ, ನೆಲ್ಲಿಕೊಪ್ಪ, ಮೂಗೂರು, ಬಾರಂಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಸಂಪರ್ಕ ರಸ್ತೆ ಮತ್ತು ಜಮೀನು-ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಇದನ್ನೂಓದಿ:IPL ವೇಳಾಪಟ್ಟಿ ಪ್ರಕಟ : ಬಾಕಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ ನೋಡಿ

ಕಳೆದೆರೆಡು ದಶಕದಲ್ಲೇ ಇತಿಹಾಸ ಸೃಷ್ಟಿಸಿದ ನೆರೆ ನೋಡಲು ಸಮೀಪದ ಜಡೆ ಮತ್ತು ಆನವಟ್ಟಿ ಸುತ್ತಲಿನ ಪ್ರದೇಶಗಳ ಜನರು ಬಂಕಸಾಣ ಸೇತುವೆ, ಗೋಂದಿ ಸೇತುವೆ ಮತ್ತು ಬಂಕಸಾಣ ಗ್ರಾಮದಲ್ಲಿ ನೆರೆಯನ್ನು ವೀಕ್ಷಿಸಲು ಕುಟುಂಬಸ್ಥರೊಂದಿಗೆ ತಂಡೋಪ ತಂಡವಾಗಿ ಆಗಮಿಸಿದ ದೃಶ್ಯ ಕಂಡುಬಂತು.

Advertisement

ಕೆಲವರು ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ವಾಹನಗಳನ್ನು ತೊಳೆಯುತ್ತಿದ್ದರೆ. ಮತ್ತೆ ಕೆಲವರು ರಸ್ತೆ ಸಂಪರ್ಕ ಕಡಿತವಾಗಿರುವುದು ತಿಳಿದೇ ವಾಪಾಸ್ ಹೋದ ಘಟನೆಗಳು ಜರುಗಿದವು. ಮಳೆ ಪ್ರಮಾಣ ಇಳಿಕೆಯಾದರೂ ಸಹ ಹೊಲ-ಗದ್ದೆಗಳಲ್ಲಿನ ನೆರೆ ಇಳಿಯಲು ಕನಿಷ್ಠ ಮೂರ್ನಾಲ್ಕು ದಿನಗಳು ಬೇಕಾಗಬಹುದು ಎನ್ನುತ್ತಾರೆ ಸ್ಥಳೀಯ ರೈತರು.

Advertisement

Udayavani is now on Telegram. Click here to join our channel and stay updated with the latest news.

Next