Advertisement

ವ್ಯಕ್ತಿ ಕೊಲೆ: 24 ಗಂಟೆಯೊಳಗೆ ಆರೋಪಿಗಳು ಸೆರೆ

06:41 PM Jun 13, 2021 | Team Udayavani |

ಮೈಸೂರು: ಮೈಸೂರಿನ ಅದೀಶ್ವರನಗರದಲ್ಲಿವ್ಯಕ್ತಿಯೊಬ್ಬರ ಕೊಲೆ ಪ್ರಕ ರಣಕ್ಕೆ ಸಂಬಂಧಿಸಿದಂತೆಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಇಲವಾಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ರಾಜಸ್ಥಾನ ಮೂಲದ ತೇಜ್‌ಮಾಲ್‌ ರಾಯಿಕಾ ಮತ್ತು ಪ್ರಕಾಶ್‌ ಬಂಧಿತ ರಾಗಿದ್ದು,ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ. ಇವರಿಬ್ಬರು ಪಾಂಡವಪುರ ಮೂಲದ ರವೀಶ್‌(36)ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಮಾಡಿದ್ದರು ಎಂದು ಎಸ್ಪಿ ಆರ್‌.ಚೇತನ್‌, ನಜರ್‌ಬಾದ್‌ನಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಕಾರ್ಯಾಲಯದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಪ್ರಮುಖ ಆರೋಪಿ ತೇಜ್‌ ಮಾಲ್‌ರಾಯಿಕಾ ಮೃತ ರವೀಶ್‌ ಜೊತೆ ಸೇರಿ ಮೊಬೈಲ್‌ಅಂಗಡಿ ಮತ್ತು ಡಿಟಿಎಚ್‌ ಸರ್ವಿಸ್‌ ನಡೆಸುತ್ತಿದ್ದು,ಇತ್ತೀಚೆಗೆ ಹಣಕಾಸು ವಿಚಾರದಲ್ಲಿ ಮನಸ್ತಾಪಉಂಟಾಗಿ ಗಲಾಟೆ ಮಾಡಿಕೊಂಡಿದ್ದರು. ರವೀಶ್‌ನನ್ನು ಹತ್ಯೆ ಮಾಡಲು ನಿರ್ಧರಿಸಿದ ತೇಜ್‌ಮಾಲ್‌ ರಾಯಿಕಾ, ಪ್ರಕಾಶ್‌ ಎಂಬಾತನ್ನು ಸೇರಿಸಿಕೊಂಡು ಜೂನ್‌ 9 ರಂದು ಮೈಸೂರಿನ ಅದೀಶ್ವರನಗರದ ಖಾಲಿ ನಿವೇಶನವೊಂದರಲ್ಲಿ ರವೀಶ್‌ಗೆ ಮದ್ಯಪಾನ ಮಾಡಿಸಿ ಹತ್ಯೆ ಮಾಡಿರುವುದುತನಿಖೆಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿಆರೋಪಿಗಳನ್ನು ಪತ್ತೆ ಹಚ್ಚು ವಲ್ಲಿ ಯಶಸ್ವಿಯಾದಸಿಪಿಐ ಎಂ. ಮಹೇಶ್‌, ಮೈಸೂರು ಗ್ರಾಮಾಂತರಪಿ ಎಸ್‌ಐ ಎಚ್‌.ಕೆ. ನಿಖೀತಾ, ಇಲವಾಲಪೊಲೀಸ್‌ ಠಾಣೆ ಎಎಸ್‌ಐ ಸಿ. ಜಗದೀಶ್‌ ಹಾಗೂಸಿಬ್ಬಂದಿ ಕಾರ್ಯವನ್ನು ಪ್ರಶಂಶಿಸಿದರು. ಜೊತೆಗೆತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಿಬ್ಬಂದಿಗೂತಲಾ 5 ಸಾವಿರ ಬಹುಮಾನ ನೀಡುವುದಾಗಿ ಎಸ್ಪಿಆರ್‌.ಚೇತನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next