Advertisement

ಮೊಬೈಲ್‌ನಲ್ಲೇ ವ್ಯವಹರಿಸಿ 1.5 ಲಕ್ಷ ರೂ.ಗೆ ಮಗು ಖರೀದಿ!

05:51 PM Jun 11, 2021 | Team Udayavani |

ಎಚ್‌.ಡಿ.ಕೋಟೆ: ಮಗುವನ್ನು ದತ್ತು ಪಡೆಯಲು ಕಾನೂನು ಪ್ರಕಾರ ಹಲವು ನಿಯಮಗಳು ಇವೆ.ಇವುಗಳನ್ನು ಪಾಲಿಸಿಯೇ ಮಗು ದತ್ತು ಸ್ವೀಕರಿಸಬೇಕಾಗುತ್ತದೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಕೊಳ್ಳುವಂತೆ ಮಗುವನ್ನುದುಡ್ಡು ಕೊಟ್ಟು ಖರೀದಿಸಲಾಗಿದೆ.

Advertisement

ಕೋಟೆ ತಾಲೂಕಿನ ಟೈಗರ್‌ಬ್ಲಾಕ್‌ನಲ್ಲಿ ನೆಲೆಸಿರುವ ದಂಪತಿ ಕಳೆದ 7 ತಿಂಗಳ ಹಿಂದೆ ಹಾಲುಗಲ್ಲದ ಹಸುಳೆಯನ್ನು 1.50 ಲಕ್ಷ ರೂ.ಗೆ ಖರೀದಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಸಾಲಿಗ್ರಾಮದ ಹಕ್ಕಿಪಿಕ್ಕಿ ಸಮುದಾಯ ರೋಜಾ ಎಂಬಾಕೆಯೇ ದುಡ್ಡಿನಾಸೆಗೆ ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಾರೆ.

ಏನಿದು ಘಟನೆ:? ಕೇಶ ತೈಲ, ಗಿಡಮೂಲಕೆಗಳ ಔಷಧವನ್ನು ಆನ್‌ಲೈನ್‌ ಮೂಲಕ ಮಾರಾಟಮಾಡುವ ವೃತ್ತಿಯಲ್ಲಿ ತೊಡಗಿರುವ ರೋಜಾ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎಚ್‌.ಡಿ.ಕೋಟೆಪಟ್ಟಣದಿಂದ 5-6 ಕಿ.ಮೀ. ದೂರವಿರುವ ಟೈಗರ್‌ಬ್ಲಾಕ್‌ನ ನಿವಾಸಿಗಳಾದ ಅಂಬರೀಶ್‌ ಹಾಗೂ ಮಧುಮಾಲತಿ ದಂಪತಿಗೆ ಮಕ್ಕಳಿರಲಿಲ್ಲ. ಈ ನಡುವೆ,ಈ ದಂಪತಿಗೆ ಗಿಡಮೂಲಿಕೆಗಳ ಔಷಧವನ್ನುಖರೀದಿಸುವಾಗ ರೋಜಾ ಪರಿಚಯವಾಗಿದ್ದಾರೆ.

ಕಳೆದ 7 ತಿಂಗಳ ಹಿಂದೆ ರೋಜಾಗೆ ಗಂಡು ಮಗು ಜನಿಸಿತ್ತು. ಅಂಬರೀಶ್‌ ಹಾಗೂ ಮಧುಮಾಲತಿ ದಂಪತಿಗೆ ಕಳೆದ 15 ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಅವರು ಮಗುವನ್ನು ದತ್ತು ಪಡೆಯುವ ಯೋಚನೆಯಲ್ಲಿದ್ದರು. ರೋಜಾಗೆ ಜನಿಸಿದ ಮಗುವನ್ನು ತಮಗೆ ನೀಡುವಂತೆ ಈ ದಂಪತಿ ಕೇಳಿಕೊಂಡಿದ್ದಾರೆ.

ಆಗ ರಾಜಾ 1.5 ಲಕ್ಷ ರೂ. ಹಣಕ್ಕೆ ಬೇಡಿಕೆಯೊಡ್ಡಿದ್ದಾರೆ. ಇದಕ್ಕೆ ಸಮ್ಮತಿಸಿದ ದಂಪತಿ ಹಣವನ್ನು ಪಾವತಿಸಿ ಮಗುವನ್ನು ಖರೀದಿಸಿದ್ದಾರೆ. ಈ ಕುರಿತು ಮಧುಮಾಲತಿ ಅವರೇ ಖುದ್ದು ಹೇಳಿಕೊಂಡಿದ್ದಾರೆ.”ನನಗೆ ಹೆಣ್ಣು ಮಗು ಬೇಕಿತ್ತು. ಆದರೆ, ಗಂಡು ಮಗುವಾಗಿದ್ದರಿಂದ ಇದನ್ನು ಮಾರಾಟಮಾಡುತ್ತಿದ್ದೇನೆ’ ಎಂದು ಅಂಬರೀಶ್‌-ಮಧುಮಾಲತಿ ಬಳಿ ರೋಜಾ ಹೇಳಿಕೊಂಡಿದ್ದಾರೆ.

Advertisement

ಈ ಮಧ್ಯೆ, ಟೈಗರ್‌ಬ್ಲಾಕ್‌ಗೆ ಆಗಮಿಸಿದ ರೋಜಾ, ನನಗೆ ಮಗು ಬೇಕೇಬೇಕೆಂದು ಅಂಬರೀಶ್‌-ಮಧು ದಂಪತಿ ಜೊತೆ ವಾಗ್ವಾದಕ್ಕಿಳಿದು ರಂಪಾಟ ನಡೆಸಿದಾಗ ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.ಮೊಬೈಲ್‌ನಲ್ಲಿ ಮಗು ಮಾರಾಟ ಮಾಡುವಾಗ ಹಣಕ್ಕೆ ಬೇಡಿಕೆಯೊಡ್ಡಿರುವ ಸಂಭಾಷಣೆಗಳು ದೊರೆತಿವೆ. ಮಗು ಮಾರಾಟ ಪ್ರಕ್ರಿಯೆಯಲ್ಲಿ ಹಣಕ್ಕಾಗಿ ಚೌಕಾಸಿ ನಡೆಸಿರುವುದು ಆಡಿಯೋದಲ್ಲಿ ಕಂಡುಬಂದಿದೆ.

ಈ ಮಗುವು ರೋಜಾಗೆ ಜನಿಸಿತ್ತೋ ಅಥವಾ ಯಾರದೋ ಮಗುವನ್ನು ತನ್ನ ಮಗುವೆಂದು ಹೇಳಿ ಮಾರಾಟ ಮಾಡಿದ್ದಾರೋ ಇಲ್ಲವೇ ಶಿಶು ಮಾರಾಟ ಜಾಲ ಇದೆಯೋ ಎಂಬ ಅನುಮಾನಗಳುವ್ಯಕ್ತವಾಗಿವೆ. ಪ್ರಸ್ತುತ ಮಗು ಅಂಬರೀಶ್‌-ಮಧುಮಾಲತಿ ದಂಪತಿ ಬಳಿ ಇದೆ. ಮಗು ಮಾರಾಟಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next