Advertisement

ಈಜಲು ಹೋದ ಮೂವರು ಯುವಕರ ಮೃತ ದೇಹಗಳು ಪತ್ತೆ

10:02 AM Aug 25, 2021 | Team Udayavani |

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಚಂದಗೋನಹಳ್ಳಮ್ಮ ದೇವಾಲಯದ ಬಳಿ ಮಂದಗೆರೆ ಎಡದಂಡ ನಾಲೆಯಲ್ಲಿ ಈಜಲು ಹೋಗಿ ಜಲಸಮಾಧಿಯಾಗಿದ್ದ ಮೈಸೂರಿನ ಮೂವರು ಯುವಕರ ಮೃತ ದೇಹಗಳು ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ.

Advertisement

ಕೆ.ಆರ್.ಪೇಟೆ ತಾಲ್ಲೂಕಿನ ಚಂದಗೋನಹಳ್ಳಮ್ಮ ದೇವಾಲಯದ ಬಳಿ ಮಂದಗೆರೆ ಎಡದಂಡ ನಾಲೆಯಲ್ಲಿ ನಿನ್ನೆ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದ ಮೈಸೂರಿನ ಮೂವರು ಯುವಕರ ಮೃತ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಹೇಮಾವತಿ ನದಿಯ ಮಂದಗೆರೆ ಎಡದಂಡ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನಿನ್ನೆ ತಡರಾತ್ರಿ ಕತ್ತಲಾದ್ದರಿಂದ ಶವಗಳ ಶೋಧನಾ ಕಾರ್ಯವನ್ನು ನಿಲ್ಲಿಸಿ ನಾಲೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಲಾಗಿತ್ತು.

ಇದನ್ನೂ ಓದಿ:ಮಟ್ಟುವಿನಲ್ಲಿ ಮನೆಗೆ ಬೆಂಕಿ, ಸುಟ್ಟು ಕರಕಲಾದ ಮನೆಯ ಮೇಲ್ಛಾವಣಿ -50 ಸಾವಿರಕ್ಕೂ ಅಧಿಕ ನಷ್ಟ

ಇಂದು ಬೆಳಿಗ್ಗೆ ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಶ್ ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮೃತ ದೇಹಗಳನ್ನು ಕಾಲುವೆಯಿಂದ ಹೊರತೆಗೆದು ಮೃತ ದೇಹಗಳ ಮರಣೋತ್ತರ ವರದಿ ಪಡೆಯಲು ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

Advertisement

ಮೂರೂ ಮೃತ ಯುವಕರ ಕುಟುಂಬದ ಸದಸ್ಯರ ಆಕ್ರಂದನವು ಮುಗಿಲು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next