Advertisement

ಜಮಖಂಡಿ : ನಗರದ ಅರಮನೆಯ ಹತ್ತಿರ ರಾಣಿ ಕೆರೆಯಲ್ಲಿ ಈಜಲು ಹೋದ ಯುವಕ ಸಾವನ್ನಪ್ಪಿದ ಘಟನೆ ಶನಿವಾರ (ಮಾ.20) ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ತಾಲೂಕಿನ ಆಲಗೂರ ಗ್ರಾಮದ ಆಕಾಶ ತುಕಾರಾಮ ಗುರವ್ವ (18) ಎಂದು ಗುರುತಿಸಲಾಗಿದ್ದು, ಈತ ಮತ್ತು ಈತನ  6 ಜನ ಸ್ನೇಹಿತರು ರಾಮತೀರ್ಥ ಅರಮನೆಯ ಹತ್ತಿರದ  ರಾಣಿ ಕೆರೆಯಲ್ಲಿ ಪ್ರತಿ ನಿತ್ಯ ಓಟದ ಸ್ಪರ್ಧೆ ಮುಗಿಸಿದ ನಂತರ ಈಜು ಕಲಿಯಲು ಬರುತ್ತಿದ್ದರು. ಎಲ್ಲರೂ ಬಿ.ಎಸ್.ಎಫ್ ಯೋಧರಾಗುವ ಕನಸು ಕಟ್ಟಿಕೊಂಡಿದರು. ಹೀಗಾಗಿ ಪ್ರತಿ ನಿತ್ಯ ಈಜು ಮತ್ತು ಓಟವನ್ನು ಕಲಿಯುತ್ತಿದ್ದರು ಎನ್ನಲಾಗಿದೆ.

ಸಾಯಂಕಾಲ ಈಜಲು ಹೋಗಿದ ಯುವಕ ನೀರಿನಲ್ಲಿ ಮುಳುಗಿದ್ದು, ಈತನ  ಶವದ ಪತ್ತೆಯ ಕಾರ್ಯಾಚರಣೆಯಲ್ಲಿ   ಅಗ್ನಿಶಾಮಕ ದಳ ಹಾಗೂ ಈಜುಗಾರರ ತಂಡ ಬೋಟ್ ನ ಮೂಲಕ ತಡರಾತ್ರಿಯವರೆಗೆ ಶೋಧ ಕಾರ್ಯಾಚರಣೆ ನಡೆಸಿದರು. ಕತ್ತಲು ಆವರಿಸಿದ ಹಿನ್ನೆಲೆಯಲ್ಲಿ ಶವ ಪತ್ತೆಯಾಗದ ಕಾರಣ ವಾಪಾಸ್ ಮರಳಿದರು.

ಇದನ್ನೂ ಓದಿ:ವಿಶ್ವ ಹ್ಯಾಪಿನೆಸ್ ವರದಿ 2021 : ಫಿನ್ ಲ್ಯಾಂಡ್ ಗೆ ಮೊದಲ ಸ್ಥಾನ, ಭಾರತಕ್ಕೆ?

ಬೆಳಗಿನ ಜಾವ ಮತ್ತೆ ಪೋಲಿಸ್ ಇಲಾಖೆ. ಅಗ್ನಿಶಾಮಕ ದಳ. ಈಜುಗಾರರ ತಂಡದೊಂದಿಗೆ ಬೋಟಿನ‌ ಮೂಲಕ ಕಾರ್ಯಾಚರಣೆ ನಡೆಸಿ ಶವವನ್ನು  ಪತ್ತೆ ಹಚ್ಚಿ ಮೇಲೆ ಎತ್ತಾಯಿತು. ಈ ಸಮಯದಲ್ಲಿ ಶವವನ್ನು ನೋಡಿದ  ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಗ್ರಾಮೀಣ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸ್ಥಳಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಭೇಟಿ ನೀಡಿ ಕುಟುಂಬಸ್ಥರಿಗೆ ಸ್ವಾಂತಾನ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಹಶೀಲ್ದಾರ ಸಂಜಯ ಇಂಗಳೆ. ಗ್ರಾಮೀಣ ಠಾಣೆ ಪಿ ಎಸ್ ಐ. ಬಸವರಾಜ ಅವಟಿ    ಪೋಲಿಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಶಾಮಕ ದಳ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next