Advertisement

ಕೋರ್ಟ್ ಖರ್ಚಿಗಾಗಿ ಬರೋಬ್ಬರಿ 25 ಬೈಕ್ ಕದ್ದರು!

08:36 PM Sep 03, 2021 | Team Udayavani |

ಹೊಸಪೇಟೆ :ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿಗಳು, ಕೋರ್ಟ್ ಖರ್ಚು ನಿಭಾಯಿಸಲು, ಬೈಕ್ ಕಳ್ಳತನ ಗೈದು, ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ.

Advertisement

ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಾಲ್ವರು ಬೈಕ್ ಕಳ್ಳರನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು, ಬಂಧಿಸಿ, 25 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವೇಳೆ 1 ಮತ್ತು 2 ನೇ ಆರೋಪಿಗಳು ಬಳ್ಳಾರಿ ಜಿಲ್ಲೆಯ ಗ್ರಾಮಯೊಂದರಲ್ಲಿ ಜರುಗಿದ ಅತ್ಯಾಚಾರ ಮತ್ತು ಕೊಲೆ  ಪ್ರಕರಣದಲ್ಲಿ  ವಿಚಾರಣೆ ಎದುರಿಸುತ್ತಿದ್ದರು. ಇವರು ಕೋರ್ಟ್ ಖರ್ಚು ನಿಭಾಯಿಸಲು ಬೈಕ್ ಕಳ್ಳತನ ನಡೆಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕಳೆದ ಆ.29ರಂದು ಪಟ್ಟಣ ಠಾಣೆ ಪೊಲೀಸರು, ನಗರದ ಕನಕದಾಸ ವೃತ್ತದಲ್ಲಿ ಬೈಕ್ ಕಳ್ಳರ ಶೋಧ ನಡೆಸುತ್ತಿರುವ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕಮಲಾಪುರ, ಕೊಪ್ಪಳ ಹಾಗೂ ಗಂಗಾವತಿ ಕಡೆಗಳಲ್ಲಿ ಜನನಿಬಿಡ ಪ್ರದೇಶದಲ್ಲಿ  ದ್ವಿಚಕ್ರ ವಾಹನಗಳಿಗೆ ನಕಲಿ ಕೀ ಬಳಸಿ ಕಳ್ಳತನ ಮಾಡಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು.

Advertisement

ಇದನ್ನೂ ಓದಿ:ಪ್ರಧಾನಿ ಮೋದಿ ಮನೆಯಂಗಳದಲ್ಲಿ ಕೇರಳದ ಪುಟಾಣಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ

1 ನೇ ಆರೋಪಿ ಹಾಗೂ ಬೈಕ್ ಖರೀದಿ ಮಾಡಿದ 2,4 ಹಾಗೂ 5 ಆರೋಪಿಗಳನ್ನು ದಸ್ತಗಿರಿ ಮಾಡಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದ 2 ನೇ ಆರೋಪಿ, ಬೈಕ್ ಕಳ್ಳತನ ಪ್ರಕರಣದಲ್ಲಿ ಕೊಪ್ಪಳದ ನಗರ ಠಾಣೆಯಲ್ಲಿ ಬಂಧನವಾಗಿ, ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನನ್ನು ಕೂಡ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next