Advertisement

ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ನದಿಯಲ್ಲಿ ಹೆಣವಾಗಿ ಪತ್ತೆ

12:56 PM Feb 14, 2021 | Team Udayavani |

ಬೆಳಗಾವಿ/ಗೋಕಾಕ: ಮನೆಯಲ್ಲಿ ಜಗಳವಾಡಿ ಮೂರು ದಿನಗಳಿಂದ ಕಾಣೆಯಾಗಿದ್ದ ತಾಯಿ, ತನ್ನ  ಇಬ್ಬರು ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

Advertisement

ಗೋಕಾಕ ತಾಲೂಕಿನ ಅರಭಾಂವಿಯ ಸಾವಿತ್ರಿ ರಾಜು  ಬನಾಜ(30), ಪೂಜಾ(4), ಲಕ್ಷ್ಮೀ (2) ಮೃತ ದುರ್ದೈವಿಗಳು. ಕಳೆದ ಮೂರು ದಿನ ಹಿಂದೆ ಮನೆಯಲ್ಲಿ ಜಗಳವಾಡಿ, ಜೀವನದಲ್ಲಿ ಜಿಗುಪ್ಸೆಗೊಂಡು ಕಾಣೆಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಹೆಚ್ಚಿದ ಮೀಸಲಾತಿ ಹೋರಾಟದ ಕಿಚ್ಚು..ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗು  

ನಾಪತ್ತೆ ಆಗಿರುವ ಬಗ್ಗೆ ಗಂಡನ ಮನೆಯವರು ಶನಿವಾರ ದೂರು ನೀಡಿದ್ದರು. ರವಿವಾರ ಬೆಳಿಗ್ಗೆ ಘಟಪ್ರಭಾ ನದಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಈ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next