Advertisement

ಜರ್ಮನಿ ಪ್ರಜೆಗೆ ಕರುಣೆ ತೋರಿದ ಪೊಲೀಸರು!

01:50 PM May 19, 2021 | Team Udayavani |

ಬೆಂಗಳೂರು: ಕೌಟುಂಬಿಕ ಸಮಸ್ಯೆಯಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡು ಮಾನಸಿಕ ಅಸ್ವಸ್ಥನಾಗಿದ್ದ ವಿದೇಶಿ ಪ್ರಜೆಗೆ ಸಂಪಂಗಿ ರಾಮನಗರ ಪೊಲೀಸರು ವೀಸಾ, ಪಾಸ್‌ಪೋರ್ಟ್‌ ಕೊಡಿಸಿ ಆತನನ್ನು ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

ಜರ್ಮನಿ ಮೂಲದ ರೋರ್ಡಿಗೊ ಅನ್ಫಟ್‌(47) ಎಂಬವರು 2019 ನವೆಂಬರ್‌ ನಿಂದ 2020 ನವೆಂಬರ್‌ ಅವಧಿವರೆಗೆ ಪ್ರವಾಸಿ ವೀಸಾ ಪಡೆದುಕುಟುಂಬ ಸಮೇತದೆಹಲಿ, ಕರ್ನಾಟಕಕ್ಕೆ ಬಂದಿದ್ದರು.ಈ ಮಧ್ಯೆ ಕೌಟುಂಬಿಕ ಸಮಸ್ಯೆಯಿಂದ ಸ್ನೇಹಿತೆ ಹಾಗೂ ಕುಟುಂಬ ಸದಸ್ಯರು ರೋರ್ಡಿಗೊ ಬಿಟ್ಟು ಸ್ವದೇಶಕ್ಕೆ ತೆರಳಿದ್ದರು. ಅದರಿಂದ ಮಾನಸಿಕ ಅಸ್ವಸ್ಥನಾದ ರೋರ್ಡಿಗೊ ನಗರದಲ್ಲಿ ಅಲೆದಾಡಿ, ನಿರಾಶ್ರಿತ ಪ್ರದೇಶಗಳಲ್ಲಿ ಮಲಗಿ ಜೀವನ ಕಳೆಯುತ್ತಿದ್ದ.

ಮತ್ತೂಂದೆಡೆ ಈ ಮಾಹಿತಿ ಪಡೆದ ಜರ್ಮನಿರಾಯಭಾರಿ ಕಚೇರಿಯ ಅಧಿಕಾರಿಗಳು ಎಲ್ಲೆಡೆ ಹುಡುಕಾಟ ನಡೆಸಿ ಮಾರ್ಚ್‌ನಲ್ಲಿ ರೋರ್ಡಿಗೊನನ್ನು ಪತ್ತೆ ಹಚ್ಚಿ ಜರ್ಮನಿ ಕಳುಹಿಸಲು ವ್ಯವಸ್ಥೆಮಾಡಿದ್ದು, ವಿಮಾನ ನಿಲ್ದಾಣಕ್ಕೂ ಕಳುಹಿಸಿದ್ದರು.ಆದರೆ, ಅಲ್ಲಿನ ಪೊಲೀಸರ ಕಣ್ಣು ತಪ್ಪಿಸಿರೋರ್ಡಿಗೊ ತಪ್ಪಿಸಿಕೊಂಡು ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಹಣ ದರೋಡೆ ಯತ್ನಿಸಿದಾಗ ಪತ್ತೆ: ಅನಂತರಸಂಪಂಗಿರಾಮನಗರ ಠಾಣಾ ವ್ಯಾಪ್ತಿಯ ಆರ್‌ಆರ್‌ಎಂ ಹೋಟೆಲ್‌ ಬಳಿ ಕಳ್ಳನೊಬ್ಬ ರೋರ್ಡಿಗೊನಿಂದ ಹಣ ದರೋಡೆಗೆ ಮುಂದಾಗಿದ್ದ. ಆಗಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದಪಿಎಸ್‌ಐ ಬಸವರಾಜ ತಾಳಿಕೋಟಿ ಮತ್ತು ಸಿಬ್ಬಂದಿಕಳ್ಳನನ್ನು ಹಿಡಿದು ರೋರ್ಡಿಗೊನನ್ನು ರಕ್ಷಿಸಿದ್ದಾರೆ.

ಬಳಿಕ ಆತನನ್ನು ವಿಚಾರಿಸಿದಾಗ ಪೊಲೀಸರ ಜತೆಗೆವಾಗ್ವಾದ ನಡೆಸಿದ್ದ. ಆತ ಮಾನಸಿಕ ಅಸ್ವಸ್ಥ ಎಂದುತಿಳಿಯುತ್ತಿದ್ದಂತೆ ಆತನ ಬಳಿಯಿದ್ದ ಪಾಸ್‌ಪೋರ್ಟ್‌, ವೀಸಾ ಪಡೆದು ಪರಿಶೀಲಿಸಿದಾಗಜರ್ಮನಿ ಮೂಲದವನು ಎಂದು ಗೊತ್ತಾಗಿದೆ.ಬಳಿಕ ಜರ್ಮನಿ ರಾಯಭಾರಿ ಕಚೇರಿಗೆಇ-ಮೇಲ್‌ ಮೂಲಕ ಮಾಹಿತಿ ನೀಡಲಾಯಿತು.

Advertisement

ಅವರ ಸಲಹೆ ಮೇರೆಗೆ ರೋರ್ಡಿಗೊನನ್ನುನಿಮ್ಹಾನ್ಸ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು.ಮತ್ತೂಂದೆಡೆ ಆತನ ಕುಟುಂಬ ಸದಸ್ಯರನ್ನುಸಂಪರ್ಕಿಸಿ ವಿಚಾರ ತಿಳಿಸಲಾಯಿತು. ಅನಂತರಕುಟುಂಬದವರು ರಾಯಭಾರಿ ಕಚೇರಿ ಅಧಿಕಾರಿಗಳನ್ನು ಸಂಪರ್ಕಸಿ ವಿಮಾನ ಟೆಕೆಟ್‌ಕಳುಹಿಸಿದರು.

ಅದುವರೆಗೂ ರೋರ್ಡಿಗೊಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಿ, ಊಟಉಪಚಾರ ಮಾಡಲಾಯಿತು. ಬಳಿಕ ಮೇ 4ರಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಬೋರ್ಡಿಂಗ್‌ ಪಾಸ್‌ಪಡೆದು ವಿಮಾನಕ್ಕೆಕೂರಿಸಿ ಕಳುಹಿಸಲಾಯಿತು ಎಂದು ಎಸ್‌.ಆರ್‌.ನಗರ ಪೊಲೀಸರು ಮಾಹಿತಿ ನೀಡಿದರು.ಈ ಕುರಿತು ಮಾಹಿತಿ ನೀಡಿದ ಪಿಎಸ್‌ಐಬಸವರಾಜ ತಾಳಿಕೋಟಿ, ಮೇ 1ರಂದುರೋರ್ಡಿಗೊ ರಸ್ತೆಯಲ್ಲಿ ಸಿಕ್ಕಾಗ ಆತ ಮಾನಸಿಕ ಅಸ್ವಸ್ಥ ಎಂದು ಗೊತ್ತಾಯಿತು. ರಾಯಭಾರಿ ಕಚೇರಿ ಸಂಪರ್ಕಿಸಿ ಆತನನ್ನು ಕೆಲ ದಿನಗಳ ನಿಮ್ಹಾನ್ಸ್ ನಲ್ಲಿಚಿಕಿತ್ಸೆ ಕೊಡಿಸಿ ಜರ್ಮನಿಗೆ ಕಳುಹಿಸಲಾಯಿತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next