Advertisement

ಐವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

01:51 PM Jun 11, 2021 | Team Udayavani |

ಬೆಂಗಳೂರು: ಡಾರ್ಕ್‌ ವೆಬ್‌ಸೈಟ್‌ ಮೂಲಕಅರ್ಡರ್‌ ಮಾಡಿ ಬಿಟ್‌ ಕಾಯಿನ್‌ ಮೂಲಕ ಹಣಪಾವತಿಸಿ ವಿದೇಶಗಳಿಂದ ಮಾದಕ ವಸ್ತುಗಳನ್ನುತರಿಸಿ ಮಾರುತ್ತಿದ್ದ ಒಬ್ಬ ವಿದೇಶಿ ಪ್ರಜೆ ಸೇರಿ ಐವರುಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರು ಬಂಧಿಸಿದ್ದಾರೆ.ನೈಜಿರಿಯಾ ಮೂಲದ ಅರ್ನಾಲ್ಡಾ ಪೋಸ್ಕಾಲ್‌ ಡಿಸೋಜಾ(27), ಬೆಂಗಳೂರಿನ ಬಾಯಾನ್‌ ಅನ್ಸಾರಿ(26), ಅನಿರುದ್ಧ್ ವೆಂಕಟಚಲಂ (23), ಕನಿಷ್ಕಾ ರೆಡ್ಡಿ(23) ಮತ್ತು ಸಂತೋಷ್‌ (28) ಬಂಧಿತರು.

Advertisement

ಅವರಿಂದ 30 ಲಕ್ಷ ರೂ. ಮೌಲ್ಯದ 119 ಎಂಡಿಎಂಎಎಕ್‌ಸ್ಟೈಸಿ ಮಾತ್ರೆಗಳು, 150 ಎಲ್‌ಎಸ್‌ ಡಿ ಪೇಪರ್‌,ಆರು ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.ಇದೇ ಪ್ರಕರಣದಲ್ಲಿ ಮೇ 29ರಂದು ಒಬ್ಬ ವಿದೇಶಿಪ್ರಜೆ ಸೇರಿ ಆರು ಮಂದಿಯನ್ನು ಬಂಧಿಸಿ 35 ಲಕ್ಷರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆಪಡೆಯಲಾಗಿತ್ತು.

ಈ ಆರೋಪಿಗಳ ಮಾಹಿತಿಮೇರೆಗೆ ಇದೀಗ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.ಈ 11 ಮಂದಿ ಆರೋಪಿಗಳು ಡಾರ್ಕ್‌ವೆಬ್‌ನಟಾರ್‌ ಬ್ರೌಸರ್‌ ಹಾಗೂ ಡ್ರಿvx… ವೆಬ್‌ಸೈಟ್‌ ನಿಂದಮಾಹಿತಿ ಪಡೆದು ವಿಕರ್‌ ಮಿ ಆ್ಯಪ್‌ನಲ್ಲಿ ವಗತಾರ್‌ಎಂಬ ಸ್ಥಳೀಯ ವೆಂಡರ್‌ನಿಂದ ಬಿಟ್‌ ಕಾಯಿನ್‌ಮೂಲಕ ಹಣ ಪಾವತಿಸಿ ಕಡಿಮೆ ಬೆಲೆಗೆ ಎಂಡಿಎಂಎಮತ್ತು ಎಕ್‌ಸ್ಟೈಸಿ ಮಾತ್ರೆಗಳು ಮತ್ತು ಎಲ್‌ಎಸ್‌ ಡಿಸ್ಟ್ರಿ±Õ…ಗಳನ್ನು ಕೊರಿಯರ್‌ ಮೂಲಕ ತರಿಸಿಕೊಳ್ಳುತ್ತಿದ್ದರು.

ಗಾಂಜಾವನ್ನು ಬೆಂಗಳೂರಿನ ಡ್ರಗ್ಸ್  ಪೆಡ್ಲರ್‌ಗಳ ಮೂಲಕ ತರಿಸಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.ಲಾಕ್‌ಡೌನ್‌ ಸಡಿಲಿಕೆ ಅವಧಿಯಲ್ಲಿ ಮಾರಾಟ:ಕೊರೊನಾ ನಿಯಂತ್ರಣಕ್ಕೆ ಲಾಕ್‌ ಡೌನ್‌ ಮಾಡಿದ್ದು,ಕೆಲ ಅಗತ್ಯ ವಸ್ತುಗಳ ಓಡಾಡಕ್ಕೆ ಸಡಿಲಿಕೆ ಮಾಡಲಾಗಿದೆ. ಇದೇ ಸಮಯದಲ್ಲಿ ಬೆಳಗ್ಗೆ ಆರು ಗಂಟೆಯಿಂದಹತ್ತು ಗಂಟೆ ಅವಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳು,ಪರಿಚಿತರು, ಐಟಿ-ಬಿಟಿ ಕಂಪನಿ ಉದ್ಯೋಗಳಿಗೆಮಾರಾಟ ಮಾಡುತ್ತಿದ್ದರು. ಎಕ್‌ಸ್ಟೈಸಿ ಮತ್ತು ಎಲ್‌ಎಸ್‌ ಡಿ ಅನ್ನು ಪ್ರತಿ ಪೀಸ್‌ಗೆ ನಾಲ್ಕರಿಂದ ಐದುಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದುಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next