Advertisement

ವಿಜಯಪುರ: 9 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧನಿಂದ ಅತ್ಯಾಚಾರ

11:21 AM Oct 14, 2021 | Team Udayavani |

ವಿಜಯಪುರ: ಆಟವಾಡಲು ತಮ್ಮ ಮನೆಗೆ ಬರುತ್ತಿದ್ದ ಒಂಬತ್ತು ವರ್ಷದ  ಬಾಲಕಿ‌ ಮೇಲೆ 60 ವರ್ಷದ ವೃದ್ದ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ವರದಿಯಾಗಿದೆ.

Advertisement

ವೃದ್ಧನ ನೀಚ ಕೃತ್ಯ ಸಂತ್ರಸ್ತ ಬಾಲಕಿಗೆ ತೀವ್ರ ರಕ್ತಸ್ರಾವವಾದ ಬಳಿಕ ಬೆಳಕಿಗೆ ಬಂದಿದೆ.

ಆಯುಬ್ ಮೊಮೀನ್ ಎಂಬ ವೃದ್ದನಿಂದನೇ ಬಾಲಕಿ ಮೇಲೆ ಅತ್ಯಾಚಾರದ ನೀಚಕೃತ್ಯ ಎಸಗಿದ ಆರೋಪಿ.

ಈ ಬಗ್ಗೆ ಗಾಂಧಿಚೌಕ್ ಪೊಲೀಸ್ ಠಾಣಾ ಪೊಲೀಸರು ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ್ದಾರೆ.

ರಕ್ತಸ್ರಾವದಿಂದ ಬಳಲುತ್ತಿರುವ ಬಾಕಿಯನ್ನು ಸರ್ಕಾರಿ ಜಿಲ್ಲಾ ಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕಿ ಹೇಳಿಕೆ ಆಧರಿಸಿ ಆರೋಪಿ ಮೋಮಿನ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯ ವಿಚಾರಣೆ ಆರಂಭಿಸಿದ್ದಾರೆ.

Advertisement

ಇದನ್ನೂ ಓದಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18,987 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಹೆಚ್ಚಳ

ಈ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next