ಉಪ್ಪುಂದ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ (ಮೇ.14ರಂದು) ಕಾಲ್ತೋಡು ಗ್ರಾಮದಲ್ಲಿ ನಡೆದಿದೆ.
ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂರ್ಸಿ ಹೊಸ್ಮನೆ ನಿವಾಸಿ ಪ್ರಕಾಶ ಶೆಟ್ಟಿ (33) ಮೃತ ದುರ್ದೈವಿ.
ಪ್ರಕಾಶ ಶೆಟ್ಟಿ ಅವರು ಕೃಷಿ ಕೆಲಸವನ್ನು ಮಾಡಿಕೊಂಡಿದ್ದು ಮೇ.13ರಂದು ಮನೆಯಿಂದ ಕೆಲಸಕ್ಕೆ ಹೊರಗೆ ಹೋಗಿದ್ದು ನಾಪತ್ತೆ ಆಗಿರುತ್ತಾರೆ. ಮನೆಯ ಸಮೀಪದ ತೋಟ, ಗೇರು ತೋಟ ಹಾಗೂ ತೋಟದ ಬಳಿ ಇರುವ ಕೆರೆಯಲ್ಲಿ ಹುಡುಕಾಡಿದಾಗ ಪ್ರಕಾಶ ಶೆಟ್ಟಿಯವರ ಮೃತ ದೇಹವು ದೊರಕಿದೆ.
ಪ್ರಕಾಶ ಶೆಟ್ಟಿಯವರು ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಎಂದು ಬೈಂದೂರು ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.