Advertisement

ಉಪ್ಪಿನಂಗಡಿ: ಬೈಕ್ ಗೆ ಢಿಕ್ಕಿ ಹೊಡೆದ ಟೆಂಪೋ ; ಬೈಕ್ ಸವಾರ ಸ್ಥಳದಲ್ಲೇ ಸಾವು

01:29 PM Oct 19, 2021 | Team Udayavani |

ಉಪ್ಪಿನಂಗಡಿ: ಟೆಂಪೋವೊಂದು ದ್ವಿಚಕ್ರ ಸವಾರನಿಗೆ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ಮಂಗಳವಾರ ನಡೆದಿದೆ.

Advertisement

ಮಂಗಳೂರಿನ ಕುಂಟಲ್ಪಾಡಿ ನಿವಾಸಿ ಸಚಿನ್ (29) ಮೃತ ದುರ್ಧೈವಿ ಎಂದು ತಿಳಿದು ಬಂದಿದೆ. ಸವಾರನೊಂದಿಗೆ ಪ್ರಯಾಣಿಸುತ್ತಿದ್ದ ಸಂದೀಪ್ ಎಂಬವವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗದಿಂದ ಬಂದ ಟೆಂಪೋ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಟೆಂಪೋ ಚಕ್ರಗಳು ಸಚಿನ್ ತಲೆ ಮೇಲೆ ಹರಿದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next