ಉಪ್ಪಿನಂಗಡಿ: ಪತಿಯ ಸಮ್ಮುಖದಲ್ಲೇ ಸಾಹದ್ ಎನ್ನುವಾತ ಮಾನಭಂಗಕ್ಕೆ ಮುಂದಾಗಿದ್ದು, ಈ ಸಂದರ್ಭ ತಡೆದ ಪತಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಮುಡಿಜಾಲುವಿನ ಜಮೀಲಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ಅಕ್ರಮ ಪ್ರವೇಶ ಮಾಡಿದ ಸಾಹದ್ ಮಾನಭಂಗಕ್ಕೆ ಯತ್ನಿಸಿದಾಗ ತನ್ನ ಗಂಡ ಅಬೂಬಕ್ಕರ್ ತಡೆಯೊಡ್ಡಿದ್ದರು. ಈ ಸಂದರ್ಭ ಸಾಹದ್ ಮನೆಯ ಹೊರಗೆ ಹೋಗಿ ದೊಣ್ಣೆಯೊಂದಿಗೆ ಬಂದು ಅಬೂಬಕ್ಕರ್ ಅವರಿಗೆ ಜೀವಬೆದರಿಕೆಯೊಡ್ಡಿ ದೊಣ್ಣೆಯಿಂದ ತಲೆ, ಮುಖ, ಸೊಂಟಕ್ಕೆ ಹೊಡೆದಿದ್ದ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.