Advertisement

ಕಾರ್ಯಚರಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್

09:08 PM Feb 19, 2021 | Team Udayavani |

ಶಿವಮೊಗ್ಗ : ಕಾರ್ಯಚರಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದ ಘಟನೆ ಶಿವಮೊಗ್ಗ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.

Advertisement

ದೀಪು ಅಲಿಯಾಸ್ ಡಿಂಗಾ ಎಂಬ ರೌಡಿ ಶೀಟರ್‌ ಮೇಲೆ ಫೈರಿಂಗ್ ನಡೆಸಲಾಗಿದೆ. ಈತ ಬಚ್ಚನ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ಇತ್ತೀಚೆಗೆ ತನ್ನ ಸಹಚರರ ಮೂಲಕ ಇಮ್ರಾನ್ ಎಂಬ ವ್ಯಾಪಾರಿಗೆ ಹಣಕ್ಕಾಗಿ ಡೀಲ್ ಇಟ್ಚಿದ್ದ. ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಹಣಕ್ಕಾಗಿ ಬೆದರಿಕೆ ಹಾಕಿದ್ದ. ರೌಡಿ ಶೀಟರ್‌ ಡಿಂಗಾ ಶಿವಮೊಗ್ಗ ಹೊರವಲಯದಲ್ಲಿರುವ ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಠಾಣೆ ಇನ್ ಸ್ಪೆಕ್ಟರ್ ದೀಪಕ್ ತಂಡ ಸುತ್ತುವರೆದಿದೆ.

ಇದನ್ನೂ ಓದಿ :  ದೇಣಿಗೆ ವಿಚಾರವಾಗಿ ಎಚ್‌ಡಿಕೆ ಹೇಳಿಕೆ ಸರಿಯಲ್ಲ: ಡಿಸಿಎಂ ಅಶ್ವಥ್‌ನಾರಾಯಣ

ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ದೀಪು ಚೈನು ಚಾಕುವನ್ನು ಪೊಲೀಸರ ಮೇಲೆ ಬೀಸಿದ್ದಾನೆ. ತಕ್ಷಣ ಪ್ರಾಣರಕ್ಷಣೆಗಾಗಿ ಇನ್ ಸ್ಪೆಕ್ಟರ್ ದೀಪಕ್, ದೀಪುವಿನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಗಾಯಾಳು ದೀಪುವನ್ನು ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next