Advertisement

ಶಿವಮೊಗ್ಗ: ಸಾವರ್ಕರ್‌ –ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ  ಯುವಕನಿಗೆ ಚೂರಿ ಇರಿತ

06:38 PM Aug 15, 2022 | Team Udayavani |

ಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿಷಯಕ್ಕೆ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ಯುವಕನಿಗೆ ಚಾಕು ಇರಿದ ಘಟನೆ  ನಡೆದಿದೆ.

Advertisement

ಪ್ರೇಮ್ ಸಿಂಗ್(20) ಎಂಬಾತನಿಗೆ ಚೂರಿ ಇರಿಯಲಾಗಿದೆ. ಗಾಂಧಿ ಬಜಾರ್ ನಲ್ಲಿರುವ ನಂದಿ ಟೆಕ್ಸ್ ಟೈಲ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರೇಮ್ ಸಿಂಗ್ ಗೆ ಗಾಂಧಿ ಬಜಾರ್‌ ನ ಉಪ್ಪಾರ ಕೇರಿ ಸಮೀಪ ಅನ್ಯಕೋಮಿನ ಯುವಕರು ಚಾಕು ಇರಿದಿದ್ದಾರೆ.

 

ಇದನ್ನೂ ಓದಿ: ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಗಾಯಾಳನ್ನು ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ತುರ್ತು ನಿಗ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಈಗಾಗಲೇ ಸಾವರ್ಕರ್‌ – ಟಿಪ್ಪು ಫೋಟೋ ವಿವಾದದಿಂದಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿಬಜಾರ್ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next