Advertisement

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು

01:33 PM Nov 28, 2021 | Team Udayavani |

ಶಿರಸಿ: ಯುವಕನೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ನೀಡಿದ ಪೋಕ್ಸೋ ಪ್ರಕರಣ ದಾಖಲಾಗಿದೆ.

Advertisement

ನೊಂದ ಬಾಲಕಿಯ ತಂದೆ  ಮೂಲತಃ ಕುಂದಗೋಳದ ಮೌಲಾಲಿ ದಾದೆಅಲಿ  ಖಾನ್ (26 ವರ್ಷ)  ವಿರುದ್ದ ದೂರು‌ ನೀಡಿದ್ದಾರೆ.

ಮಗಳನ್ನು ಪರಿಚಯ ಮಾಡಿಕೊಂಡ ಆರೋಪಿ ನ.27 ರಂದು 4.30 ಗಂಟೆ ಸುಮಾರಿಗೆ  ಬಾಲಕಿಗೆ ಮಾತನಾಡುವುದಿದೆ ಅಂತಾ ಹೇಳಿ ನಗರದ ಕೆಎಚ್ ಬಿ ಕಾಲೋನಿ ಯಲ್ಲಿ ಇರುವ ಸಾಲುಮರದ ತಿಮ್ಮಕ್ಕ  ಉದ್ಯಾನವನಕ್ಕೆ ಕರೆಸಿಕೊಂಡು ನಿನ್ನನು ಪ್ರೀತಿಸುತ್ತೇನೆ ಎಂದು ಹೇಳಿ,  ಅವಳ ಮೈ,  ಕೈ, ಮುಟ್ಟಿ ಅವಳ ಹೆಗಲ ಮೇಲೆ ಕೈ ಹಾಕಿಕೊಂಡು ತೊಂದರೆ ಕೊಟ್ಟಿದ್ದಾನೆ ಎಂದು ದೂರು‌ ನೀಡಿದ್ದಾರೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಎಸ್ ಸಿ‌ಎಸ್  ದೌರ್ಜನ್ಯ ತಡೆ ಅಡಿ  ಪ್ರಕರಣವನ್ನು  ಪಿಎಸ್ಐ ಭೀಮಾಶಂಕರ್   ದಾಖಲಿಸಿಕೊಂಡಿದ್ದಾರೆ.  ಡಿಎಸ್ ಪಿ ರವಿ ಡಿ ನಾಯ್ಕ ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next