Advertisement

ಉಳ್ಳಾಲ: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಶಾಲೆಯಲ್ಲಿ ಆಕಸ್ಮಿಕ ಬೆಂಕಿ

01:11 PM Jul 19, 2021 | Team Udayavani |

ಉಳ್ಳಾಲ:  ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಶಾಲೆಯೊಂದರ ವಿಜ್ಞಾನ ಲ್ಯಾಬ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್  ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಮುಂಜಾಗರೂಕತಾ ಕ್ರಮವಾಗಿ ವಿದ್ಯಾರ್ಥಿಗಳನ್ನು  ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಕಟ್ಟಡಕ್ಜೆ ಸ್ಥಳಾಂತರಿಸಿ ಪರೀಕ್ಷೆಯನ್ನು ಮುಂದುವರೆಸಿದ ಘಟನೆ ತೊಕ್ಕೊಟ್ಟು ಸ ಮೀಪದ ಬಬ್ಬುಕಟ್ಟೆಯಲ್ಲಿ ನಡೆದಿದೆ.

Advertisement

ಬಬ್ಬು ಕಟ್ಟೆಯ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಿಜ್ಞಾನ ಲ್ಯಾಬ್ ನಲ್ಲಿ‌ಘಟನೆ ನಡೆದಿದ್ದು, ಲ್ಯಾಬ್ ನಲ್ಲಿದ್ದ ರೆಫ್ರಿಜರೇಟರ್ ನಿಂದ ಬೆಂಕಿ‌ಕಾಣಿಸಿಕೊಂಡಿದ್ದು ಶಾಲೆಯ ಕೋಣೆಯಲ್ಲಿ ದಟ್ಟ ಹೊಗೆ ಹಬ್ಬಿತ್ತು. ಪರೀಕ್ಷ ಆರಂಭವಾಗಿ ಒಂದೂವರೆ ಗಂಟೆ ಬಳಿಕ ಘಟನೆ ನಡೆದಿದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದು, ತಕ್ಷಣವೇ ಶಾಲಾಭಿವೃದ್ದಿ ಸಮಿತಿ ಮತ್ತು ಶಾಲೆಯ ಶಿಕ್ಷಕರು ವಿದ್ಯಾರ್ಥಿ ಗಳನ್ನು ಶಾಲಾ ಕಟ್ಟಡದ ಪಕ್ಜದಲ್ಲೇ ಇರುವ ಪದವಿ ಕಾಲೇಜಿನ ಕೊಠಡಿಯಲ್ಲಿ ಪರೀಕ್ಷೆ ಆರಂಭಿಸಲು ವ್ಯವಸ್ಥೆ ಮಾಡಿದರು.

ಇದನ್ನೂ ಓದಿ: ಕೋವಿಡ್ ಆತಂಕದ ನಡುವೆಯೂ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿ‌ಕುಮಾರ್, ಹಿರಿಯ ಪೊಲೀಸ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳುಆಗಮಿಸಿದ್ದು ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next