ಜೈಪುರ: ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ದೇಗುಲದ ಅರ್ಚಕ ನವರತ್ನ ಪ್ರಜಾಪತ್ (72) ಮತ್ತು ಅವರ ಪತ್ನಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.
Advertisement
ಭಾನುವಾರ ರಾತ್ರಿ ಪ್ರಜಾಪತ್ ಅವರು ಮನೆಯಲ್ಲಿ ಪತ್ನಿಯ ಜತೆಗೆ ಊಟ ಮಾಡುತ್ತಿದ್ದಾಗ ಹತ್ತು ಮಂದಿ ಈ ಕೃತ್ಯವೆಸಗಿದ್ದಾರೆ.
ವೃದ್ಧ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಜಾಪತ್ ಅವರ ಬದಲಿಗೆ ಮತ್ತೂಬ್ಬರನ್ನು ನೇಮಕ ಮಾಡಬೇಕು ಎಂಬ ವಿಚಾರಕ್ಕೆ ತಕ್ಕಂತೆ ಈ ಪ್ರಕರಣ ನಡೆದಿದೆ ಎಂದು ದೇವಗಢದ ಠಾಣಾಧಿಕಾರಿ ತಿಳಿಸಿದ್ದಾರೆ.