Advertisement

ರಾಯಚೂರು: ಬೊಲೆರೋ ವಾಹನ ಢಿಕ್ಕಿ; ಬೈಕ್ ಸವಾರ ಸಾವು,ಪತ್ನಿ ಗಂಭೀರ

07:14 PM Aug 16, 2022 | Team Udayavani |

ರಾಯಚೂರು: ನಗರದ ಮನ್ಸಲಾಪೂರ ರಸ್ತೆಯಲ್ಲಿ ಬೊಲೆರೊ ವಾಹನ ಹಾಗೂ  ದ್ವಿಚಕ್ರ ವಾಹನ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Advertisement

ಮೃತ ವ್ಯಕ್ತಿ ನರಸಪ್ಪ (33), ಆತನ ಪತ್ನಿ ಮಾಯಮ್ಮ ಗಂಭೀರ ಗಾಯಗೊಂಡಿದ್ದಾರೆ.

ನಿನ್ನೆ (ಸೋಮವಾರ) ರಾತ್ರಿ 9 ಗಂಟೆಗೆ ಮೃತ ನರಸಪ್ಪನ ಪತ್ನಿ ತೀವ್ರ ಜ್ವರದಿಂದ ಬಳಲುತ್ತಿದ್ದರು, ಅವರನ್ನು ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ.

ನರಸಪ್ಪ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟಿದ್ದಾರೆ. ಮೃತ ನರಸಪ್ಪ ಅವರಿಗೆ 2 ಮಕ್ಕಳಿದ್ದಾರೆ.

ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next