ರಬಕವಿ-ಬನಹಟ್ಟಿ: ವಿವಾಹಿತ ಮಹಿಳೆಯೋರ್ವಳು ಅನ್ಯ ವ್ಯಕ್ತಿಯೊಂದಿಗೆ ಸಲುಗೆಯಿಂದ ಹೀಗೆ ಉದ್ಯೋಗ ಸಮಯದಲ್ಲಿರಬಾರದೆಂದು ಬುದ್ದಿವಾದ ಹೇಳಿದ ವ್ಯಕ್ತಿಯೊಂದಿಗೇನೆ ಜಗಳವಾಡಿ ಇಬ್ಬರೂ ಸೇರಿ ಚಪ್ಪಲಿಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದ ಪರಿಣಾಮ ಮನಸ್ಸಿಗೆ ಹಚ್ಚಿಕೊಂಡು ಬನಹಟ್ಟಿ ನೂಲಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ ಘೋಡಕೆ ಬನಹಟ್ಟಿಯ ಚಿಂಡಕ ಅವರ ಬಾವಿಯ ಆಳವಾದ ನೀರಿನಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.
ಬನಹಟ್ಟಿಯ ಸಹಕಾರಿ ನೂಲಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿತರಾದ ನಿರ್ಮಲಾ ಗಂಡ ಜಗದೀಶ ಅಡಬಟ್ಟಿ ಹಾಗು ಅಂಬರೀಶ ಬಸವಣ್ಣಿ ಕಾಳ್ಯಾಗೋಳ ಇಬ್ಬರೂ ವ್ಯಕ್ತಿಗಳಿಂದ ಮನನೊಂದು ಇವರೊಂದಿಗೆ ಕೆಲಸ ಮಾಡುತ್ತಿದ್ದ ಸುನೀಲ ಘೋಡಕೆ(೪೫) ಎಂಬಾತನೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.
ಮೃತನ ಪತ್ನಿ ಶರ್ಮಿಲಾ ಘೋಡಕೆ ಫರ‍್ಯಾಧಿ ನೀಡಿದ್ದು, ಪಿಎಸ್‌ಐ ಸುರೇಶ ಮಂಟೂರ ತನಿಖೆ ಮುಂದುವರೆಸಿದ್ದಾರೆ.