ಕುಂಬಳೆ: ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕಿಯನ್ನು ಯುವಕನೊಬ್ಬ ಎತ್ತಿ ನೆಲಕ್ಕೆ ಎಸೆದ ಘಟನೆ ಮಂಜೇಶ್ವರ ಉದ್ಯಾವರ ಬಳಿ ಗುರುವಾರ ಬೆಳಗ್ಗೆ 7 ಗಂಟೆಗೆ ನಡೆದಿದೆ.
ಕುಂಜತ್ತೂರು ಮೂಲದ ಅಬೂಬಕರ್ ಸಿದ್ದಿಕಿ ಎಂಬಾತ ಒಂಬತ್ತು ವರ್ಷದ ಬಾಲಕಿಯನ್ನು ಅಮಾನುಷವಾಗಿ ನೆಲಕ್ಕೆ ಎಸೆದಿದ್ದಾನೆ. ಆತನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಸಿಸಿ ಕೆಮರಾದ ವೀಡಿಯೋ ದೃಶ್ಯಾವಳಿಗಳು ವ್ಯಾಪಕವಾಗಿ ಹರಡುತ್ತಿವೆ.
ರಸ್ತೆಯಲ್ಲಿ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿನಿಯನ್ನು ಯಾವುದೇ ಪ್ರಚೋದನೆ ಇಲ್ಲದೆ ಎತ್ತಿ ನೆಲಕ್ಕೆ ಎಸೆದಿದ್ದಾನೆ. ನಿಧಾನವಾಗಿ ಬಾಲಕಿಯ ಕಡೆಗೆ ನಡೆದ ಅನಂತರ ಅವನು ಆಕೆಯನ್ನು ಎತ್ತಿಕೊಂಡು ನೆಲದ ಮೇಲೆ ಎಸೆದಿದ್ದಾನೆ. ಬಳಿಕ ಏನೂ ಆಗಿಲ್ಲವೆಂಬಂತೆ ಹಿಂದೆ ಸರಿದಿದ್ದಾನೆ. ಗಂಭೀರ ಗಾಯಗೊಂಡ ಬಾಲಕಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಯ ಪೋಷಕರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿ ಮಾದಕ ವಸ್ತು ವ್ಯಸನಿಯಾಗಿದ್ದ ಎನ್ನಲಾಗಿದೆ.