Advertisement

ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಫೈರಿಂಗ್

05:39 PM Oct 05, 2021 | Team Udayavani |

ಮಂಗಳೂರು: ಅಪ್ಪನಿಂದಲೇ ಮಗನ ಮೇಲೆ ಫೈರಿಂಗ್ ನಡೆದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ಸಂಭವಿಸಿದೆ.

Advertisement

ಮೋರ್ಗನ್ಸ್ ಗೇಟ್ ಬಳಿ ಅಪ್ಪನಿಂದಲೇ ಮಗನ ಮೇಲೆ ಶೂಟೌಟ್ ನಡೆದಿದೆ. ಬಾಲಕ ಸುಧೀಂದ್ರ  (14) ತಲೆಗೆ ಗುಂಡು ತಗುಲಿದೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡಿದ್ದಾನೆ.

ಉದ್ಯಮಿಯ ಕಚೇರಿಯಲ್ಲಿ ಘಟನೆ ನಡೆದಿದ್ದು ಕೆಲಸಗಾರರ ನಡುವಿನ ಗೊಂದಲದ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಘಟನೆ ಕುರತು ಪ್ರತಿಕ್ರಿಯೆ ನೀಡಿದ ಕಮಿಷನರ್, ಯಾರು ಗುಂಡು ಹಾರಿಸಿದ್ದಾರೆಂದು ಈಗಲೇ ಸ್ಪಷ್ಟವಾಗಿ ಹೇಳಲಾಗದು. ಸಿಸಿ ಕೆಮರಾ ದೃಶ್ಯ ಪರಿಶಿಲಿಸಲಾಗುವುದು. ಗುಂಡು ಎಡಗಣ್ಣಿನ ಭಾಗದಿಂದ 7-8 ಇಂಚು ಒಳಗೆ ಹೋಗಿದೆ. ಗಾಯಾಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಾನೆ. ಎರಡು ರೌಂಡ್ ಗುಂಡು ಹಾರಾಟವಾಗಿದೆ ಎಂದು ಅವರು ಹೇಳಿದರು.

ಘಟನಾ ಸ್ಥಳಕ್ಕೆ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next