ಕುಣಿಗಲ್: ಚಲಿಸುತ್ತಿದ್ದ ಸ್ಕೂಟಿಯಿಂದ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರ ಯ ಹೆದ್ದಾರಿ 75 ರ ಮಾಗಡಿಪಾಳ್ಯ ಬಳಿ ಸಂಬವಿಸಿದೆ.
ಮೂಲತಃ ಎಡಿಯೂರು ಹೋಬಳಿ ವೈ ಅಂಪಾಪುರ ಹಾಲಿ ಬೆಂಗಳೂರು ಪದ್ಮನಾಭ ನಗರವಾಸಿ ಪದ್ಮಮ್ಮ( 60) ಮೃತ ದುರ್ಧೈವಿ. ಶೃತಿ ಅಲಿಯಾಸ್ ಹೇಮ ಗಾಯಗೊಂಡ ಸೊಸೆ.
ಇದನ್ನೂ ಓದಿ: ಕೊಹ್ಲಿಯನ್ನು ನಾಯಕತ್ವದಿಂದ ತೆಗೆದ ಟೀಂ ಇಂಡಿಯಾ ಸುಧಾರಣೆ ಕಂಡಿಲ್ಲ: ಸಲ್ಮಾನ್ ಭಟ್
ಘಟನೆ ವಿವರ: ಕೆಲಸದ ನಿಮಿತ್ತ ಬೆಂಗಳೂರು ಪದ್ಮನಾಭನಗರದಿಂದ ಸೊಸೆ ಜೊತೆ ಎಡಿಯೂರು ಹೊಬಳಿ ವೈ ಅಂಪಾಪುರಕ್ಕೆ ಭಾನುವಾರ ಹೋಗುತ್ತಿರಬೇಕಾದರೆ, ಮಾಗಡಿಪಾಳ್ಯ ಬಳಿ ಸ್ಕೂಟಿ ಸ್ಕಿಡ್ ಆಗಿ ಹಿಂಬದಿ ಸವಾರರಾದ ಪದ್ಮಮ್ಮ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Related Articles
ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ