Advertisement

ಕುಮಟಾ: ಈಜಲು ತೆರಳಿದ ಅಸ್ವಸ್ಥ

08:13 PM Jul 26, 2021 | Team Udayavani |

ಕುಮಟಾ: ತಾಲೂಕಿನ ಗೋಕರ್ಣದ ಓಂ‌ ಬೀಚ್‌ನಲ್ಲಿ ಯುವಕನೋರ್ವ ಈಜಲು ತೆರಳಿದ ಸಂದರ್ಭದಲ್ಲಿ ಸಮದ್ರದ ಸುಳಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಸೋಮವಾರ ನಡೆದಿದೆ.

Advertisement

ಆಂದ್ರಪ್ರದೇಶ ಮೂಲದ ಪ್ರಶಾಂತ ನಾಗಭೂಷಣ (23) ಅಸ್ವಸ್ಥಗೊಂಡ ಯುವಕನಾಗಿದ್ದಾನೆ. ಈತನು ತನ್ನ ಕುಟುಂಬದವರ ಜೊತೆ ಗೋಕರ್ಣಕ್ಕೆ ಆಗಮಿಸಿದ್ದು, ಓಂ ಬೀಚ್‌ನಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: 4 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ: ರಾಜ್ಯದಲ್ಲಿ ತಗ್ಗಿದ ಕೋವಿಡ್ ಮಹಾಮಾರಿ

ಲೈಫ್ ಸೇಫ್‌ಗಾರ್ಡ್ ಸಿಬ್ಬಂದಿಗಳು ಈತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಗೆ ಖಾಸಗಿ ಅಂಬ್ಯುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಒದಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next