ಕುಂಬಳೆ : ವಿಕಲಚೇತನ ಬಾಲಕಿಯ ಕೈಕಾಲು ಕಟ್ಟಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಫೋಕ್ಸೋ ಕಾಯಿದೆಯಡಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತ್ರಿವಳಿ ಜೀವಾವಧಿ ಶಿಕ್ಷೆ ಮತ್ತು 10 ವರ್ಷದ ಕಠಿಣ ಸಜೆ ಮತ್ತು 4 ಲಕ್ಷ ರೂ.ದಂಡ ವಿಧಿಸಿದೆ.
ಉಪ್ಪಳ ಮಣಿಮುಂಡ ಶಾರದಾ ನಗರದ ಸುರೇಶ್ಯಾನೆ ಚೆರಿಯಂಬು (42)ಎಂಬಾತ ಆರೋಪಿಯಾಗಿದ್ದು ಕಳೆದ 2015 ಸೆ.22 ರಂದು ಕಿವುಡಿ ಮತ್ತು ಮೂಗಿಯಾಗಿರುವ ಬಾಲಕಿಯ ಮನೆಗೆ ತಂದೆ ತಾಯಂದಿರು ಇಲ್ಲದ ವೇಳೆ ನೋಡಿ ನುಗ್ಗಿ ಕುಡಿಯಲು ನೀರು ಕೇಳಿ ಬಾಲಕಿಯ ಕೈ ಕಾಲು ಕಟ್ಟಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದರಂತೆ ನ್ಯಾಯಾಲಯಕ್ಕೆ 25 ಮಂದಿ ಸಾಕ್ಷಿದಾರರ ಹೇಳಿಕೆಯನ್ನು ಮತ್ತು 31 ದಾಖಲು ಪತ್ರವನ್ನು ನ್ಯಾಯಾಲಯ ದಾಖಲಿಸಿ ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿದೆ.
ಆರೋಪಿ ಈ ಹಿಂದೆಯೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನು.ಅಂದು ಮಂಜೇಶ್ವರ ಎಸ್ಐ ಯಾಗಿದ್ದ ಪಿ ಪ್ರಮೋದ್, ಬಳಿಕ ಡಿವೈಎಸ್ಪಿ ಟಿ ಪಿ ಪ್ರೇಮರಾಜನ್, ಕುಂಬಳೆ ಎಸ್ಐ ಕೆ ಪಿ ಸುರೇಶ್ ಬಾಬು ಪ್ರಕರಣದ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.
Related Articles
…………………………………………………………………………………………………………………………..
ಲಾರಿ ಢಿಕ್ಕಿ ಹೊಡೆದು ಗಾಯಗೊಂಡ ವ್ಯಕ್ತಿ ಸಾವು
ಕುಂಬಳೆ: ಕಳೆದ ನ.28 ರಂದು ತಲಪ್ಪಾಡಿ ಟೋಲ್ ಗೇಟ್ಬಳಿಯಲ್ಲಿ ಲಾರಿ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಆದೂರು ಚೇಡಿ ಕುಂಡ ನಿವಾಸಿ ವಸಂತ ಕುಮಾರ್ ರೈ (55) ಸಾವಿಗೀಡಾಗಿದ್ದಾರೆ.
ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಕಾಸರಗೋಡು ಡಿಪ್ಪೊದಲ್ಲಿ ಉದ್ಯೋಗದಲ್ಲಿದ್ದರು.ಮೃತರು ಪತ್ನಿ,ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಳೆದ ಎರಡು ತಿಂಗಳೊಳಗೆ ವಸಂತ ಕುಮಾರ್ ರೈ ಅವರ ಸಹೋದರರಾದ ಸದಾನಂದ ರೈ ಯವರು ಮೃತಪಟ್ಟಿದ್ದರು. ಕಳೆದ ಒಂದು ತಿಂಗಳ ಹಿಂದೆ ಸದಾನಂದ ರೈ ಮತ್ತು ಕಳೆದ 20 ದಿನಗಳ ಹಿಂದೆ ಚಂದ್ರಶೇಖರ ರೈ ಅವರು ಅಸೌಖ್ಯದಿಂದ ಸಾವಿಗೀಡಾಗಿದ್ದು ಇದೀಗ ಇನ್ನೋರ್ವ ಸಹೋದರ ವಸಂತ ಕುಮಾರ್ ರೈ ಅವರ ಮರಣದಿಂದ ಮನೆ ಮಸಣವಾಗಿದೆ.