Advertisement

ಕೋಟ: ನದಿಯಲ್ಲಿ ಮುಳುಗಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿ ಸಾವು

02:01 PM Sep 27, 2021 | Team Udayavani |

ಕೋಟ : ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂದಾರ್ತಿ ಸಮೀಪ ನಂಚಾರಿನಲ್ಲಿ ರವಿವಾರ ಸಂಭವಿಸಿದೆ.

Advertisement

ಮಧುವನ ಸಮೀಪದ ಖಾಸಗಿ ನರ್ಸಿಂಗ್ ಕಾಲೇಜು  ವಿದ್ಯಾರ್ಥಿ ಜಿಬಿನ್‌ ಸಾಮ್‌ (20 ವರ್ಷ ) ಮೃತ ವಿದ್ಯಾರ್ಥಿ. ಈತ ಕೇರಳ ಮೂಲದವನಾಗಿದ್ದು ಎರಡನೇ ವರ್ಷದ ನರ್ಸಿಂಗ್ ನಲ್ಲಿ‌ ವಿದ್ಯಾಭ್ಯಾಸ ಮಾಡುತ್ತಿದ್ದ.

ಇದನ್ನೂ ಓದಿ: ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಸೇರಿದಂತೆ ಯಾರಿಂದಲೂ ಸಾಧ್ಯವಿಲ್ಲ: ದೇವೇಗೌಡ

26 ರಂದು ಅಮುಲ್‌ ಬಿಜಿ ಎಂಬವರ ಮನೆಗೆ ಜಿಬಿನ್‌ ಸಾಮ್‌ ಸೇರಿ ಮೂವರು ಸ್ನೇಹಿತರು ಬಂದಿದ್ದರು. ಸ್ನೇಹಿತರ ಜೊತೆಯಲ್ಲಿ ನಂಚಾರು ಸಮೀಪದ ಸೀತಾ ನದಿಗೆ ಈಜಲು ತೆರಳಿದ್ದರು ಈ ವೇಳೆ ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದ ಸ್ಥಳೀಯರು ಕೂಡಲೇ ಮೇಲಕ್ಕೆತ್ತಿ  ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ವಿದ್ಯಾರ್ಥಿ  ಮೃತಪಟ್ಟಿದ್ದ.

ಕೋಟ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next