Advertisement

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

07:40 AM Mar 25, 2023 | Team Udayavani |

ಕಲಬುರಗಿ:  ನಗರದ ಜಗತ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪ್ರಮುಖ ದಾಖಲೆಗಳು ಭಸ್ಮವಾಗಿವೆ.

Advertisement

ಜಿಲ್ಲಾ ಪಂಚಾಯತ್ ಕಚೇರಿಯ ಲೆಕ್ಕಪತ್ರ ವಿಭಾಗ, ಯೋಜನಾ ವಿಙಾಗ, ಸಿಇಒ ಕಚೇರಿಯಲ್ಲಿನ ದಾಖಲಾತಿಗಳು ಬೆಂಕಿಗಾಹುತಿಯಾಗಿವೆ.

ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಪ್ರಮುಖ ದಾಖಲಾತಿಗಳು ಸುಟ್ಟು ಕರಕಲಾಗಿವೆ. ಕಂಪ್ಯೂಟರ್ ಸಹ ಸುಟ್ಟಿವೆ. ಮಾರ್ಚ್ ಅಂತ್ಯವಾಗಿರುವುದರಿಂದ ದಾಖಲೆಗಳು ನಾಶಪಡಿಸಲು ಬೆಂಕಿ ಹಚ್ಚಲಾಗಿದೆಯೇ ಆರೋಪ ಕೇಳಿ ಬರುತ್ತಿದೆ.

ಅಗ್ನಿ ಶಾಮಕದಳದ ಅಧಿಕಾರಿಗಳು ಬೆಂಕಿ‌ ನಂದಿಸಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next