ಪಣಜಿ: ಗೋವಾದ ಪ್ರಸಿದ್ಧ ದೇವಸ್ಥಾನವೊಂದರ ನಕಲಿ ಬ್ಯಾಂಕ್ ಖಾತೆ ಸೃಷ್ಠಿಸಿ ಸಂಸ್ಥೆಯ ಹೆಸರಿನಲ್ಲಿ ಅಕ್ರಮವಾಗಿ ದೇಣಿಗೆಯನ್ನು ಸಂಗ್ರಹಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಗೋವಾದ ಕವಳೆ ಶ್ರೀ ಶಾಂತಾದುರ್ಗಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‍ಸೈಟ್ ಸೃಷ್ಠಿಸಿ ನಕಲಿ ಬ್ಯಾಂಕ್ ಖಾತೆ ತೆರೆದು ಸಂಸ್ಥೆಯ ಹೆಸರಿನಲ್ಲಿ ಅಕ್ರಮವಾಗಿ ದೇಣಿಗೆಯನ್ನು ಸಂಗ್ರಹಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ ವಾಗಮರೆ (ಉಸ್ಮಾನಾಬಾದ್ ಮಹಾರಾಷ್ಟ್ರ) ವಿರುದ್ಧ ದೇವಸ್ಥಾನ ಸಮಿತಿ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದೆ.
ಇದನ್ನೂ ಓದಿ: ಕೋವಿಡ್ ಲಾಕಡೌನ್ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪಾಲಿಸಿ: ವಿಜಯಪುರ ಡಿಸಿ ಸೂಚನೆ
ಭಕ್ತಾದಿಯೊಬ್ಬರು ದೇವಸ್ಥಾನಕ್ಕೆ ಆನ್‍ಲೈನ್ ಮೂಲಕ ದೇಣಿಗೆ ಹಣ ನೀಡಲು ಮುಂದಾದಾಗ ದೇವಸ್ಥಾನದ ಹೆಸರಿನಲ್ಲಿ ನಕಲಿ ಖಾತೆಯಿರುವುದು ದೇವಸ್ಥಾನ ಸಮಿತಿಗೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮೀತಿಯ ಅಧ್ಯಕ್ಷ ತ್ರಿಲೋಕನಾಥ ಕೇರಕರ್ ಮತ್ತು ಸಂಸ್ಥೆಯ ವಕೀಲ ರಘುವೀರ ವರದೆ ರವರು ಪೊಂಡಾ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಂಡಾ ಪೋಲಿಸ್ ನಿರೀಕ್ಷಕ ಮೋಹನ್ ಗಾವಡೆ ಸೈಬರ್ ಸೆಲ್ ಸಹಕಾರದೊಂದಿಗೆ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.