Advertisement

ಕ್ಷುಲ್ಲಕ  ವಿಚಾರಕ್ಕೆ ಕಾರ್ಮಿಕನ ಕೊಲೆ

01:18 PM Nov 16, 2021 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ದುಷ್ಕರ್ಮಿಗಳು ಕಟ್ಟಡ ಕಾರ್ಮಿಕನೊಬ್ಬನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

Advertisement

ಮಧ್ಯಪ್ರದೇಶ ಮೂಲದ ಭೂಪತ್‌ಸಿಂಗ್‌ (25) ಕೊಲೆ ಯಾದ ಕಾರ್ಮಿಕ. ಕೊಲೆಗೈದ ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀ ಸರು ಹೇಳಿದರು. ಮೂರು ತಿಂಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ ಭೂಪತ್‌ ಸಿಂಗ್‌ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಬೈಯಪ್ಪನಹಳ್ಳಿಯ ಅಯ್ಯಪ್ಪ ಸ್ವಾಮಿ ದೇವಾಲ ಯ ಸಮೀಪದ ಕಟ್ಟಡವೊಂದರಲ್ಲಿ ಡ್ರಿಲ್ಲಿಂಗ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ನಿರ್ಮಾಣ ಹಂತದ ಕಟ್ಟಡ ಸಮೀಪದಲ್ಲಿ ಶೆಡ್‌ವೊಂದರಲ್ಲಿ ಸ್ನೇಹಿತರ ಜತೆ ವಾಸವಾಗಿದ್ದ.

ಎಂದಿನಂತೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಶೆಡ್‌ ಸಮೀಪದಲ್ಲಿರುವ ಬೇಕರಿಗೆ ಸ್ನೇಹಿತರ ಜತೆ ಹೋಗುತ್ತಿದ್ದ. ಈ ವೇಳೆ ಮಾರ್ಗ ಮಧ್ಯೆ ಐವರು ಆರೋಪಿಗಳು, ಭೂಪತ್‌ ಸಿಂಗ್‌ ಮತ್ತು ಆತನ ಸ್ನೇಹಿತನಿಗೆ ಮಧ್ಯೆ ರಸ್ತೆಯಲ್ಲಿ ತಡೆದು ಮುಂದೆ ಹೋಗದ್ದಂತೆ ಎಚ್ಚರಿಕೆ ನೀಡಿದ್ದಾರೆ.

ಆದರೂ ಭೂಪತ್‌ ಸಿಂಗ್‌ ಮುಂದೆ ಹೋಗಿದ್ದಾನೆ. ಬೇಕರಿಯಿಂದ ವಾಪಸ್‌ ಬರುವಾಗ ಮತ್ತೆ ಅಡ್ಡಗಟ್ಟಿದ ಆರೋ ಪಿಗಳ ಪೈಕಿ ಇಬ್ಬರು ಭೂಪತ್‌ ಸಿಂಗ್‌ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾ ಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ  ಎಂದು ಪೊಲೀಸರು ಹೇಳಿದರು.

ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next