Advertisement

ಪೊಲೀಸ್‌ ವಶದಲ್ಲಿದ್ದ ಆಫ್ರಿಕಾ ಪ್ರಜೆ ಸಾವು

10:15 PM Aug 02, 2021 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬೆಂಗಳೂರಿನ ಜೆ.ಸಿ.ನಗರ ಪೊಲೀಸರ ವಶದಲ್ಲಿದ್ದ ಆಫ್ರಿಕಾ ಮೂಲದ ಡ್ರಗ್ಸ್‌ ಪೆಡ್ಲರ್‌ ಸೋಮವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

Advertisement

ಘಟನೆ ಖಂಡಿಸಿ ಮಹಿಳೆಯರು ಸೇರಿ ಸುಮಾರು 15ಕ್ಕೂ ಅಧಿಕ ಆಫ್ರಿಕಾ ಪ್ರಜೆಗಳು ಪೊಲೀಸ್‌ ಠಾಣೆ ಮುಂಭಾಗದಲ್ಲಿ ಪ್ರತಿಭಟಿಸಿದಲ್ಲದೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಲಾಠಿಚಾರ್ಜ್‌ ನಡೆಸಿ ಸುಮಾರು 10ಕ್ಕೂ ಅಧಿಕ ಮಂದಿ ಆಫ್ರಿಕಾ ಪ್ರಜೆಗಳನ್ನು ಬಂಧಿಸಲಾಯಿತು.

ಆಫ್ರಿಕಾ ಮೂಲದ  ಜಾನ್‌ ಅಲಿಯಾಸ್‌ ಜೋಯಲ್‌ ಶಿಂದಾನಿ ಮಾಲು(27) ಮೃತಪಟ್ಟವನಾಗಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.

ಪೊಲೀಸರ ಮೇಲೆ ಹಲ್ಲೆ:

ಸೋಮವಾರ ಮಧ್ಯಾಹ್ನ 2.45ರ ಸುಮಾರಿಗೆ ಠಾಣೆ ಮುಂದೆ ಜಮಾಯಿಸಿದ  ಆಫ್ರಿಕಾ ಪ್ರಜೆಗಳು  ಪ್ರತಿಭಟನೆ ನಡೆಸಿದ್ದು, ಮಹಿಳಾ ಎಸ್‌ಐನಿಂದ ಲಾಠಿ ಕಸಿದು ಹಲ್ಲೆ ನಡೆಸಿದ್ದಾರೆ. ಮತ್ತೋರ್ವ  ಎಸ್‌ಐಗೂ ಹಲ್ಲೆ ನಡೆಸಿದ್ದಾರೆ.

Advertisement

ಏನಿದು ಘಟನೆ? :

ರವಿವಾರ ರಾತ್ರಿ  ಜೆ.ಸಿ.ನಗರ ಠಾಣೆಯ ಪಿಎಸ್‌ಐ ರಘುಪತಿ ನೇತೃತ್ವದ ತಂಡ ಜಾನ್‌ನನ್ನು  ಮಾದಕ ವಸ್ತು ಸಹಿತ ಬಂಧಿಸಲಾಗಿತ್ತು.  ಮುಂಜಾನೆ 5.10ರ ಸುಮಾರಿಗೆ ಆತನಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ  ಪೊಲೀಸರು ಆತನನ್ನು  ಸಮೀಪದ ಖಾಸಗಿ  ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ  6.45ರ ಹೊತ್ತಿಗೆ ಆಕ ಕೊನೆಯುಸಿರೆಳೆದಿದ್ದಾನೆ.

ಆಫ್ರಿಕನ್‌ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಇದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ.  ಮೃತಪಟ್ಟವನು ವಿದ್ಯಾರ್ಥಿ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ.  ಮಂಗಳವಾರ ಹಿರಿಯ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ.-ಮೋಹನ್‌ ಸುರೇಶ್‌,ರವಾಂಡ ರಾಯಭಾರ ಕಚೇರಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next