ತೀರ್ಥಹಳ್ಳಿ : ಗೃಹ ಸಚಿವರ ತವರೂರು ಆರಗದಲ್ಲಿ ಸೋಮವಾರ ರಾತ್ರಿ 10.30 ರ ಸಮಯದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಘಟನೆ ಹೇಗಾಯಿತು ?
ಆರೋಗ್ಯ ಸರಿ ಇಲ್ಲದ ಕಾರಣ ಸೋಮವಾರ ಪತಿ ಜತೆ ಮಹಿಳೆ ತೀರ್ಥಹಳ್ಳಿ ಅಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಿಂದ ಸಂಜೆ ಮನೆಗೆ ತೆರಳುತ್ತಿದ್ದ ಸಂದರ್ಭ ದಂಪತಿಗಳ ಮೇಲೆ ಬೈಕ್ ಹರಿಬಿಟ್ಟು ಅರೋಪಿಗಳು ದೌರ್ಜನ್ಯ ಎಸಗಿದ್ದಾರೆ.
ಕುಡಿತದ ಮತ್ತಿನಲ್ಲಿದ್ದ ನಾಲ್ವರು ಯುವಕರು 2 ಬೈಕ್‌ಗಳನ್ನು ಹರಿಬಿಟ್ಟ ಕಾರಣಕ್ಕೆ ಪತಿಯ ಕಾಲು, ತಲೆಗೆ ಏಟು ಬಿದ್ದು, ಕೆಲ ಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಈ ಸಂದರ್ಭ ಆರೋಪಿಗಳು ಮಹಿಳೆಯ ಬಟ್ಟೆ ಹರಿದು ವಿವಸ್ತ್ರ ಮಾಡಿದ್ದಾರೆ. ಪ್ರಜ್ಞೆ ಹೀನಾಸ್ಥಿತಿಯಲ್ಲಿದ್ದ ಮಹಿಳೆಯ ಪತಿ ತಕ್ಷಣ ಎಚ್ಚರಗೊಂಡು ಕಿರುಚಿಕೊಂಡ ನಂತರ ಸ್ಥಳೀಯರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ.
Related Articles
ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ದಂಪತಿಗಳು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.