Advertisement

ಅಜ್ಜಾವರ: ಅಪ್ರಾಪ್ತ ವಯಸ್ಕ ಯುವತಿಗೆ ಲೈಂಗಿಕ ದೌರ್ಜನ್ಯ; ದೂರು ದಾಖಲು

05:28 PM Jun 30, 2022 | Team Udayavani |

ಅರಂತೋಡು: ಅಪ್ರಾಪ್ತ ವಯಸ್ಕ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಯುವತಿ ಗರ್ಭವತಿಯಾಗಿದ್ದು, ಪುತ್ತೂರು ಗ್ರಾಮದ ಅರಿಯಡ್ಕ ನಿವಾಸಿ ಸಂದೀಪ(22)ನ ವಿರುದ್ಧ ದೂರು ದಾಖಲಾಗಿದೆ.

Advertisement

ಆರೋಪಿ ಮತ್ತು ಯುವತಿ ದೂರದ ಸಂಬಂಧಿಕರಾಗಿದ್ದು, ಅವರಿಬ್ಬರು ಕೆಲವು ಸಮಯದಿಂದ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಕೆಲವು ತಿಂಗಳ ಹಿಂದೆ ಯುವತಿಯ ದೊಡ್ಡಪ್ಪನ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂದೀಪ ಬಂದಿದ್ದು, ರಾತ್ರಿ ವೇಳೆ ಅಪ್ರಾಪ್ತ ವಯಸ್ಕ ಯುವತಿಯ ಮೇಲೆ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯ ಮನೆಯಲ್ಲಿ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ .

ಜೂ .22 ರಂದು ಯುವತಿಗೆ ಹೊಟ್ಟೆ ಬಂದು ಆಕೆಯ ಅಕ್ಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್‌ ನಡೆಸಿದ ಸಂದರ್ಭ ಯುವತಿ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಆಕೆಯನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಜೂ. 28ರಂದು ಸಂದೀಪನ ಮೇಲೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next