ಇಂಚಗೇರಿ: ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಸದೃಢವಾಗಿರಲುಅವರು ಸೇವನೆ ಮಾಡುವ ಆಹಾರ ಕಾರಣವಾಗಿತ್ತು. ರೈತರು ಜಮೀನಿನಲ್ಲಿ ತಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಸಿರಿಧಾನ್ಯ ಬೆಳೆ ಬೆಳೆದು ಬಳಸಬೇಕು ಎಂದು ಮಹಾಂತೇಶ ಮಹಾಸ್ವಾಮಿಗಳು ಹೇಳಿದರು.
ಲೋಣಿ ಗ್ರಾಮದ ಮಲ್ಲೇಶಪ್ಪ ಕಲ್ಯಾಣಶೆಟ್ಟಿ ಅವರ ತೋಟದಲ್ಲಿ ಕೃಷಿ ಇಲಾಖೆ ಇಂಡಿ, ಆತ್ಮಾಯೋಜನೆಯಡಿ ಕೃಷಿ ವಿಜ್ಞಾನಕೇಂದ್ರ,
ಸಹಯೋಗದಲ್ಲಿ ಹಮ್ಮಿಕೊಮಡಿದ್ದ ಕಿಸಾನ್ ಗೋಷ್ಠಿ ಮತ್ತು ಸಿರಿಧಾನ್ಯ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಹೆಚ್ಚಿನ ಆದಾಯಕ್ಕೊಸ್ಕರ ಕಬ್ಬು, ತೊಗರಿ, ಜೋಳ, ಮೆಕ್ಕೆಜೋಳ, ಇನ್ನು ಅನೇಕ ಬೆಳೆಗಳು ನಾವು ಬೆಳೆಯುತ್ತಿದ್ದೇವೆ. ನಮ್ಮ ತೋಟದಲ್ಲಿ ನೈಸರ್ಗಿಕ ಸಾವಯುವ ಪದ್ದತಿಯಿಂದ ಬೆಳೆಯುತ್ತಿದ್ದೇವೆ. ವಿಷಕಾರಿ ರಾಸಾಯನಿಕ ಗೊಬ್ಬರಗಳಿಲ್ಲದೆ ಆರೋಗ್ಯಕ್ಕೆ ಹೆಚ್ಚು ಲಾಭವಾಗುವ ಸಿರಿಧಾನ್ಯ ಬೆಳೆಗಳಾದ ನವಣಿ, ಹಾರಕ, ಸಾಮೆ, ಕೊರಲೆ, ಬರಗು, ಊದಲು, ಸಜ್ಜೆ, ಜೋಳ, ರಾಗಿಗೆ ಮಾರು ಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಎಂದರು.
ವಿಷಕಾರಿ ಕ್ರಿಮಿನಾಶಕ ಗೊಬ್ಬರ, ಔಷಧಯುಕ್ತ ಬೆಳೆಗಳನ್ನು ಬೆಳೆದು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಕಾರಕ. ಆತ್ಮ ಉಪ ಯೋಜನಾ ನಿರ್ದೇಶಕ ಡಾ| ಎಂ.ಬಿ. ಪಟ್ಟಣಶೆಟ್ಟಿ ಮಾತನಾಡಿ, ಕಡಿಮೆ ಮಳೆ ಮತ್ತುಎಲ್ಲ ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಸಿರಿಧಾನ್ಯವನ್ನು ರೈತರು ಹೆಚ್ಚಾಗಿ ಬೆಳೆಯಬೆಕು. ವಿಜಯಪುರ ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆ ಆಗುವ ಪ್ರದೇಶ. ಅದಕ್ಕಾಗಿ ರೈತರು ಸಿರಿಧಾನ್ಯ ಬೆಳೆಗೆ ಅವಲಂಬನೆಯಾಗಬೇಕು. ಸಿರಿಧಾನ್ಯ ಬೆಳೆಗಳು ಬೆಳೆದ ನಂತರ ಮಾರುಕಟ್ಟೆ ಬೇಡಿಕೆ ಇಲ್ಲ, ಅವುಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎನ್ನುವ ಭಯ ರೈತರಲ್ಲಿ ಇದೆ. ನಿಮ್ಮ ಜಮೀನಿನಲ್ಲಿ ನಿಮ್ಮ ಕುಟುಂಬಕ್ಕೆ ಬೇಕಾಗುವಷ್ಟು ಬೆಳೆದು ಉಳಿದ ಧಾನ್ಯ ನಮ್ಮ ಕೃಷಿ ಕೇಂದ್ರದಲ್ಲಿ ಮಾರಟ ಮಾಡಬಹುದುಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಡಾ| ವೈ.ರವಿ ಮಾತನಾಡಿ, ಸಿರಿಧಾನ್ಯ ಬೆಳೆಯ ಮಹತ್ವ ಮತ್ತು ಆರೋಗ್ಯಕ್ಕೆ ಆಗುವ ಲಾಭಗಳ ಕುರಿತು ಮಾಹಿತಿ ನೀಡಿದರು. ಚಡಚಣ ಕೃಷಿ ಅಧಿಕಾರಿ ಲಕ್ಷ್ಮೀ ಕಾಮಗೊಂಡ ಮಾತನಾಡಿದರು, ಲೋಣಿ ಗ್ರಾಪಂಅಧ್ಯಕ್ಷೆ ಸುರೇಖಾ ಮಾಳಾಬಗಿ, ಪ್ರಗತಿಪರ ರೈತರಾದ ಅಣ್ಣಾರಾಯ ಮೇತ್ರಿ, ಸಿದ್ದಣ್ಣ ಕೋಳಿ, ಬಾಪುರಾಯ ಪಾಟೀಲ, ರಾಜಶೇಖರ ನಿಂಬರಗಿ, ಎಸ್.ಟಿ. ಪಾಟೀಲ, ಮುದ್ದುಗೌಡ ಪಾಟೀಲ, ಮಲ್ಲಪ್ಪ ಕುಂಬಳಿ, ಮಲ್ಲಯ್ಯ ಕಾಂಬಳೆ, ಗಜಾನಂದ ಬನಸೋಡೆ, ರವಿ ವಾಘಮೋರೆ, ತುಕಾರಾಮ ನಾಯಕ ಇದ್ದರು.