Advertisement

ನಿರಂತರ ಮಳೆ- ಕೃಷ್ಣೆ-ಉಪನದಿಗಳಿಗೆ ಒಳಹರಿವು ಹೆಚ್ಚಳ

05:37 PM Jul 06, 2023 | Team Udayavani |

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ನಿರಂತರ ಮಳೆ ಆರಂಭವಾಗಿದೆ. ಇದರಿಂದ ಗಡಿ ಭಾಗದ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳಿಗೆ ಬರುವ ಸಂಭವನೀಯ ಪ್ರವಾಹ ಎದುರಿಸಲು ಅಧಿ ಕಾರಿಗಳು ಮತ್ತು ಎನ್‌ಡಿಆರ್‌ಎಫ್‌ ತಂಡ ಸಿದ್ಧರಾಗಬೇಕು ಎಂದು ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಹೇಳಿದರು.

Advertisement

ಬುಧವಾರ ತಾಲೂಕಿನ ಮಾಂಜರಿ, ಕಲ್ಲೋಳ ಮತ್ತು ಯಡೂರ ಗ್ರಾಮದ ಹತ್ತಿರ ಕೃಷ್ಣಾ ನದಿ ತೀರದ ಪ್ರದೇಶ ವೀಕ್ಷಿಸಿ ಎನ್‌ಡಿಆರ್‌ಎಫ್‌ ತಂಡದ ಜೊತೆ ಅವರು ಮಾತನಾಡಿದರು. ಕೃಷ್ಣಾ ನದಿಯ ಅಪಾಯ ಮಟ್ಟದ ಕುರಿತು ಸ್ಥಳವನ್ನು ಪರಿಶೀಲಿಸಿದರು.

ಕೃಷ್ಣಾ ನದಿಯಲ್ಲಿ ಪ್ರವಾಹ ಎದುರಾದರೆ ಅಂಕಲಿ, ಯಡೂರ, ಕಲ್ಲೊಳ, ಚಂದೂರ, ಇಂಗಳಿ, ಯಡೂರವಾಡಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ನದಿಯ ನೀರು ಆವರಿಸಿಕೊಳ್ಳುತ್ತದೆ. ಇದರಿಂದ ಜನ-ಜಾನುವಾರು ರಕ್ಷಣೆ ಮಾಡಬೇಕಾಗುತ್ತದೆ.

ಸುರಕ್ಷಿತ ಸ್ಥಳಕ್ಕೆ ಜನರನ್ನು ರಕ್ಷಣೆ ಮಾಡುವುದರ ಜೊತೆಗೆ ಜಾನುವಾರು ರಕ್ಷಣೆ ಮಾಡಲು ಸೂಕ್ತ ಕ್ರಮದ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಮಹಾರಾಷ್ಟ್ರದ ವಿವಿಧ ಜಲಾಶಯಗಳ ಪರಿಸರದಲ್ಲಿ ಮತ್ತು ಘಟ್ಟ ಪ್ರದೇಶದಲ್ಲಿ ಮಳೆಯಿಂದ ಕೃಷ್ಣಾ ನದಿ ನೀರಿನ ಒಳಹರಿವು ದಿಢೀರನೆ ಹೆಚ್ಚಾಗಿದೆ. ಹೀಗಾಗಿ ಪ್ರವಾಹ ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಮಾಧವ ಗಿತ್ತೆ ತಿಳಿಸಿದರು.

ಹಿಪ್ಪರಗಿ ಜಲಾಶಯಕ್ಕೆ 12,400 ಕ್ಯೂಸೆಕ್‌ ನೀರು

Advertisement

ರಬಕವಿ-ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ರಾಜಾಪುರ ಡ್ಯಾಂಗಳಿಂದ ನೀರು ಬಿಡುತ್ತಿದ್ದು, ಹಿಪ್ಪರಗಿ ಅಣೆಕಟ್ಟೆಗೆ ಸರಾಗವಾಗಿ ಹರಿದು ಬರುತ್ತಿದೆ. ಬೇಸಿಗೆ ಬವಣೆಯಿಂದ ಬೇಸತ್ತಿದ್ದ ಜನತೆಗೆ ಕೃಷ್ಣಾ ನದಿಗೆ ನೀರು ಬಂದಿರುವುದಿಂದ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಪಕ್ಕದ ಗ್ರಾಮಗಳ ಜನರು ಹಾಗೂ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಬುಧವಾರ ಹಿಪ್ಪರಗಿ ಜಲಾಶಯದಲ್ಲಿ ನೀರಿನ ಮಟ್ಟ 519.35 ಮೀ. ಇದ್ದು, ಒಟ್ಟು 12,400 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 3,720 ಕ್ಯೂಸೆಕ್‌ ನೀರು ಜಲಾಶಯದಿಂದ ಹರಿಬಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next