Advertisement

ನಿರಂತರ ಮಳೆ, ಹವಾಮಾನ ವೈಪರೀತ್ಯ: ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ಬಾಧೆ

01:30 AM Jul 04, 2022 | Team Udayavani |

ಉಡುಪಿ: ಕೋವಿಡ್‌ ಆತಂಕದ ನಡುವೆ ಕರಾವಳಿ ಜಿಲ್ಲೆಗಳ ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳವಾಗುತ್ತಿದೆ.

Advertisement

ಮಕ್ಕಳಿಗೆ ಶಾಲಾರಂಭ ಆದಾಗಿ ನಿಂದ ಹಲವಾರು ಮಂದಿ ಮಕ್ಕಳು ಒಂದಲ್ಲ ಒಂದು ರೀತಿಯ ಕಾಯಿಲೆ ಯಿಂದ ಬಳಲುತ್ತಿದ್ದಾರೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶವೆಂಬ ಭೇದವಿಲ್ಲದೆ ಎಲ್ಲೆಡೆ ಮಕ್ಕಳಲ್ಲಿ ತೀವ್ರ ಜ್ವರ, ಡೆಂಗ್ಯೂ, ನ್ಯುಮೋ ನಿಯಾ, ಕೆಮ್ಮು, ನೆಗಡಿ, ಕಾಲುಬಾಯಿ ರೋಗದಂತಹ ಲಕ್ಷಣಗಳ ಜತೆಗೆ ದಿಢೀರ್‌ ಅಸ್ವಸ್ಥತೆ ಗೋಚರಿಸುತ್ತಿವೆ.

ಕೈ-ಕಾಲು ನೋವು
ಪ್ರಾರಂಭಿಕ ಹಂತದಲ್ಲಿ ಮಕ್ಕಳಿಗೆ ಕೈಕಾಲು ನೋವು ಕಾಣಿಸಿಕೊಳ್ಳುತ್ತದೆ. ಅನಂತರ ಜ್ವರ, ಶೀತ, ಕೆಮ್ಮು, ಕಫ‌ದಂತಹ ಲಕ್ಷಣಗಳು ಕಂಡುಬರು ತ್ತವೆ. ಒಂದು ಹಂತದಲ್ಲಿ ಬಹುತೇಕ ಎಲ್ಲ ಮಕ್ಕಳಿಗೂ ಈ ಕಾಯಿಲೆ ಬಂದು ಹೋಗಿದೆ. ಈ ನಡುವೆ ಮತ್ತಷ್ಟು ಮಳೆ ಸುರಿಯುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಕೋವಿಡ್‌ ಭೀತಿ
ಮಕ್ಕಳಲ್ಲಿ ಕಂಡುಬರುತ್ತಿರುವ ಈ ಸಂಕ್ರಾಮಿಕ ರೋಗದಿಂದ ಕೋವಿಡ್‌ ಪ್ರಕರಣದ ಭೀತಿಯೂ ಎದುರಾಗಿದೆ. ಈಗಾಗಲೇ ಅನಾರೋಗ್ಯ ಸಮಸ್ಯೆ ಎದುರಿಸಿ ವೈದ್ಯರಲ್ಲಿಗೆ ಹೋಗುವ ಮಕ್ಕಳಿಗೆ ಕೋವಿಡ್‌ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗ ಲಕ್ಷಣವಿರುವವರಿಗೆ ಕೋವಿಡ್‌ ಸರ್ವೇ ಸಾಮಾನ್ಯವಾಗಿದ್ದು, ಇದು ಕೋವಿಡ್‌ ಅಂಕಿ-ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಲಿದೆ.

ವಾರದೊಳಗೆ ಕಡಿಮೆ
ಇದುವರೆಗೆ ಜ್ವರ ಸಹಿತ ಇತರ ರೋಗಲಕ್ಷಣ ಕಂಡುಬಂದ ವಿದ್ಯಾರ್ಥಿಗಳು ಔಷಧ ತೆಗೆದುಕೊಂಡ 3-4 ದಿನಗಳೊಳಗೆ ಗುಣಮುಖರಾಗಿದ್ದಾರೆ. ಆದರೆ ಮತ್ತೆ ಶಾಲೆಗಳಿಗೆ ಹೋಗುವಾಗ ಇತರರಿಗೆ ಸೋಂಕು ತಗಲಿ ಮತ್ತೆ ರೋಗ ಲಕ್ಷಣಗಳು ಹೆಚ್ಚಾಗುತ್ತಿರುವ ಘಟನೆಗಳೂ ನಡೆಯುತ್ತಿವೆ. ಹಲವು ಪ್ರಕರಣಗಳಲ್ಲಿ ಇತರ ಮಕ್ಕಳ ಮೂಲಕ ಸೋಂಕು ಹರಡಿರುವುದು ತಿಳಿದುಬಂದಿದೆ. ಈ ಕಾರಣಕ್ಕೆ ಮಕ್ಕಳು ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯು ಸಲಹೆ ನೀಡಿದೆ.

Advertisement

ಮಾಸ್ಕ್ ಕಡ್ಡಾಯ
ಕೋವಿಡ್‌ ಮುನ್ನೆಚ್ಚರಿಕೆ ಹಾಗೂ ಸಾಂಕ್ರಾಮಿಕ ರೋಗಗಳ ಹೆಚ್ಚಳ ಭೀತಿ ಇರುವ ಕಾರಣ ಜಿಲ್ಲಾಡಳಿತ ಈಗಾಗಲೇ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಆದರೆ ಇದರ ಪಾಲನೆ ಮಾತ್ರ ಅಷ್ಟಕ್ಕಷ್ಟೇ ಆಗುತ್ತಿದೆ. ಶಾಲಾ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಹಾಕಿದರೆ ಸೋಂಕು ಪ್ರಸಾರ ತಡೆಗಟ್ಟಲು ಸಾಧ್ಯವಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಹವಾಮಾನದಲ್ಲಿ ಬದಲಾವಣೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ರೋಗ ಲಕ್ಷಣ ಕಾಣಿಸಿಕೊಂಡ ತತ್‌ಕ್ಷಣ ವೈದ್ಯರನ್ನುಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.
– ಡಾ| ವೇಣುಗೋಪಾಲ್‌,
ಮಕ್ಕಳ ತಜ್ಞರು, ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next