Advertisement

ಪಶು ಆಸ್ಪತ್ರೆ ಉದ್ಘಾಟನೆ

03:49 PM Jul 08, 2019 | Suhan S |

ಹನುಮಸಾಗರ: ಗ್ರಾಮೀಣ ಪ್ರದೇಶದಲ್ಲಿ ಅನಾರೋಗ್ಯಕ್ಕಿಡಾಗುವ ರೈತರ ಜಾನುವಾರುಗಳು ಚಿಕಿತ್ಸೆ ದೊರೆಯದೇ ಮರಣ ಹೊಂದಬಾರದು ಎನ್ನುವ ಉದ್ದೇಶದಿಂದ ಪಶು ಆಸ್ಪತ್ರೆ ಸ್ಥಾಪಿಸಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.

Advertisement

ಇಲ್ಲಿಗೆ ಸಮೀಪದ ತುಗ್ಗಲಡೋಣಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಗ್ರಾಮೀಣ ಭಾಗದಲ್ಲಿ ರೈತರ ಜಾನುವಾರಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಕಾಲು ಮತ್ತು ಬಾಯಿ ಬೇನೆಯಿಂದ, ಕುರಿಗಳು ನೀಲಿ ನಾಲಿಗೆ ರೋಗದಿಂದ ಮೃತಪಡುತ್ತವೆ. ಇದನ್ನು ಮನಗಂಡು ಮುಖ್ಯಮಂತ್ರಿ ಹಾಗು ಪಶು ಸಂಗೋಪನಾ ಸಚಿವರೊಂದಿಗೆ ಚರ್ಚಿಸಿ ಬೇರೆಡೆ ಸ್ಥಳಾಂತರಕ್ಕೆ ಅವಕಾಶ ನೀಡದೇ ತ್ವರಿತವಾಗಿ ಪಶು ಆಸ್ಪತ್ರೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ| ಬಸಯ್ಯ ಸಾಲಿ ಮಾತನಾಡಿ, 20ನೇ ಜಾನುವಾರು ಗಣತಿಯಲ್ಲಿ ತಾಲೂಕಿನಲ್ಲಿ ಹೆಚ್ಚು ಜಾನುವಾರುಗಳು ಇರುವುದು ಕಂಡು ಬಂದಿದೆ. ತಾಲೂಕಿನಲ್ಲಿ 18 ಪಶು ಆಸ್ಪತ್ರೆಗಳಿವೆ. ಕೇವಲ 4 ಜನ ಮಾತ್ರ ಪಶುವೈದ್ಯಾಧಿಕಾರಿಗಳಿದ್ದಾರೆ. ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಪಶು ವೈದ್ಯರನ್ನು ನೇಮಕ ಮಾಡಿದರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಭಾಗೀರಥಿ ಎಂ. ಗಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ತಿಮ್ಮಪ್ಪ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಗದ್ದಿ, ಜಿಪಂ ಸದಸ್ಯ ನೇಮಣ್ಣ ಮೇಲಸಕ್ರಿ, ಸಿದ್ಧಪ್ಪ ರೊಟ್ಟಿ, ಚನ್ನಬಸಪ್ಪ ಹಳ್ಳದ, ಶರಣಮ್ಮ ಬೂತಾಲಿ, ಡಾ| ವಿಶ್ವನಾಥ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next