Advertisement

ವಿವಿಧ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ

01:13 PM May 25, 2022 | Team Udayavani |

ಕೈಕಂಬ: ಹಲವಾರು ವರ್ಷ ಗಳ ಜನರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಮುಖ್ಯವಾದ ಜನರ ಸಂಪರ್ಕ ಕೊಂಡಿ ರಸ್ತೆಗಳನ್ನು ಆದ್ಯತೆ ಮೇರೆಗೆ ಮಾಡಲಾಗುತ್ತದೆ. ಗ್ರಾಮ ಪಂಚಾಯತ್‌ನ ಹಳ್ಳಿಪ್ರದೇಶಗಳ ಮನೆ ಇರುವಂತಹ ಕಡೆಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಅದೇ ವೇಗದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ| ಭರತ್‌ ಶೆಟ್ಟಿ ವೈ.ಹೇಳಿದರು.

Advertisement

ಮಂಗಳವಾರದಂದು ಬಡಗ ಎಡಪದವು ಗ್ರಾಮ ಪಂ. ವ್ಯಾಪ್ತಿಯ 7.5 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿಕರಿಗೆ ನೀರಿಗೆ ಅನುಕೂಲವಾಗುವಂತಹ ಕಿಂಡಿ ಅಣೆಕಟ್ಟು ಹಾಗೂ ಅದಕ್ಕೆ ಸಂಪರ್ಕ ರಸ್ತೆಗಳನ್ನು ಮಾಡಲಾಗುವುದು. ಪರಿಸರ ಸ್ನೇಹಿ ಯೋಜನೆಯ ಗ್ರಾಮ ಪಂಚಾಯತ್‌ ಗೆ ಸೋಲಾರ್‌ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಬೆಳ್ಳೆಚಾರ್‌ ರಿಕ್ಷಾ ಚಾಲಕ ಮಾಲಕ ಸಂಘ ದಿಂದ ಶಾಸಕರಿಗೆ ಸಮ್ಮಾನ ಹಲವಾರು ವರ್ಷಗಳಿಂದ ರಸ್ತೆ ಹದ ಗೆಟ್ಟು ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಬೆಳ್ಳೆಚಾರ್‌ -ಉರ್ಕಿ ರಸ್ತೆಯನ್ನು ಕಾಂಕ್ರೀಟ್‌ ಹಾಗೂ ಡಾಮರು ಕಾಮಗಾರಿಗೆ ಅನುದಾನ ಒದಗಿಸಿದ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರನ್ನು ರಿಕ್ಷಾ ಚಾಲಕ ಹಾಗೂ ಮಾಲಕರು ಸಮ್ಮಾನಿಸಿದರು.

ಜಿ.ಪಂ. ಮಾಜಿ ಸದಸ್ಯ ಜರ್ನಾದನ ಗೌಡ, ಬಡಗ ಎಡಪದವು ಗ್ರಾಮ ಪಂಚಾಯತ್‌ ಅಧ್ಯಕ್ಷ ಹರೀಶ್‌ ಕೆ.ವಿ., ಉಪಾಧ್ಯಕ್ಷೆ ಯಶೋಧಾ, ಪಿಡಿಒ ಸವಿತಾ, ಸದಸ್ಯರಾದ ವಸಂತಿ, ಪ್ರದೀಪ್‌, ಚಂದ್ರಹಾಸ, ಮೋಹಿನಿ, ಸವಿತಾ ಎಸ್‌. ಕಮಲಾಕ್ಷಿ, ಶ್ರೀಲತಾ, ವರುಣ್‌ ಕುಮಾರ್‌, ರಾಮಕೃಷ್ಣ, ಮಾಜಿ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ, ಲಲಿತಾ ಶೆಟ್ಟಿಗಾರ್‌, ಕಾರ್ಯದರ್ಶಿ ಲಕ್ಷ್ಮಣ ಸಫಲಿಗ, ಪ್ರಸಾದ್‌ ಕುಮಾರ್‌, ತಾರಾನಾಥ ಸಫಲಿಗ, ಸುದರ್ಶನ್‌ ಪೂಂಜ, ಎಂಜಿನಿಯರ್‌ ಮಮತಾ, ಕೃತಿಕಾ, ಸಿಬಂದಿ ಸತೀಶ್‌, ಮಿಥುನ್‌, ಚೈತ್ರಾ, ಸಾವಿತ್ರಿ, ಕೇಸರಿ, ಉಮಾವತಿ ಉಪಸ್ಥಿತರಿದ್ದರು.

ಅಭಿವೃದಿ ಕಾಮಗಾರಿಗಳು

Advertisement

ದೂಮಚಡವು ಸಾರ್ವಜನಿಕ ಶೌಚಾಲಯ, ಬಡಗ ಎಡಪದವು ಗ್ರಾಮ ಪಂಚಾಯತ್‌ ಸೋಲಾರ್‌ ಮೇಲ್ಛಾವಣಿ, ಅಮೃತ್‌ ಉದ್ಯಾನವನ, ಕಾಂಬೆಟ್ಟು ದೇವಸ್ಥಾನ ಅವರಣದ ಇಂಟರ್‌ ಲಾಕ್‌ ಮತ್ತು ಹೈಮಾಸ್ಟ್‌ ದೀಪ, ದಡ್ಡಿ ಅಂಗನ ವಾಡಿ ಅಭಿವೃದ್ಧಿ, ಘನತ್ಯಾಜ್ಯ ಘಟಕದ ಗೋಡೌನ್‌, ಬೆಳ್ಳೆಚಾರ್‌ -ಉರ್ಕಿ ರಸ್ತೆ ಅಭಿವೃದ್ಧಿ, ಲತ್ರೊಟ್ಟು ಕಾಲನಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗ ಉದ್ಘಾಟನೆ ನಡೆಯಿತು. ಕಲೆಂಬಿ ಪಲ್ಕೆ ರಸ್ತೆ ಅಭಿವೃದ್ಧಿ, ಬೊಟ್ಲಾಯಿರಸ್ತೆ ಅಭಿವೃದ್ಧಿ, ಬೆಳ್ಳೆಚಾರ್‌ ವೆಂಟೆಡ್‌ ಡ್ಯಾಂ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಸಿಂಟೆಕ್ಸ್‌ ವಿತರಣೆ, 19 ವಸತಿ ಫಲಾನುಭವಿಗಳ ಕಾಮಗಾರಿ ಆದೇಶ ಪತ್ರವನ್ನು ಶಾಸಕ ಡಾ| ಭರತ್‌ ಶೆಟ್ಟಿ ವೈ. ವಿತರಣೆ ಮಾಡಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next