Advertisement

ಆರ್ಥಿಕ ಸಾಕ್ಷರತಾ ಕೇಂದ್ರ ಉದ್ಘಾಟನೆ

01:19 PM Dec 06, 2021 | Team Udayavani |

ಚಾಮರಾಜನಗರ: ಭಾರತೀಯ ರಿಸರ್ವ್‌ಬ್ಯಾಂಕ್‌, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಹಾಗೂ ಧಾನ್‌ ಫೌಂಡೇಷನ್‌ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕೊಳ್ಳೆಗಾಲದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರವನ್ನು ಉದ್ಘಾಟಿಸಿದರು.

Advertisement

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ಶ್ರೀಕಾಂತ್‌ ಉದ್ಘಾಟಿಸಿ ಮಾತನಾಡಿ, ಜನ ಆರ್ಥಿಕವಾಗಿ ಸಾಕ್ಷರರಾದರೆ ದೇಶ ಬೇಗ ಅಭಿವೃದ್ಧಿ ಹೊಂದಲು ಸಹಾಯಕವಾಗುತ್ತದೆ. ಹೀಗಾಗಿ ಎಲ್ಲರೂ ಆರ್ಥಿಕಸಾಕ್ಷರತಾ ಕೇಂದ್ರದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಾಮರಾಜನಗರ ಎಸ್‌ಬಿಐ ರುಡ್‌ಸೆಟಿನಿರ್ದೇಶಕ ಅರುಣಕುಮಾರ್‌ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ವಿವಿಧಬಗೆಯ ತರಬೇತಿ ಅವಶ್ಯಕತೆ ಇದ್ದುಪ್ರಮುಖವಾಗಿ ಆರ್ಥಿಕ ಅಂಶಗಳ ಬಗ್ಗೆ ತರಬೇತಿ ಅವಶ್ಯವಿದ್ದು ಈ ಕೇಂದ್ರಗಳು ಆ ಕಾರ್ಯ ನಿರ್ವಹಿಸಲಿದೆ ಎಂದರು.

ಧಾನ್‌ ಫೌಂಡೇಷನ್‌ ಮೈಸೂರು ವಲಯ ಸಂಯೋಜಕ ಶಂಕರ್‌ ಪ್ರಸಾದ್‌ಮಾತನಾಡಿ, ಧಾನ್‌ ಸಂಸ್ಥೆ ಭಾರತದಾದ್ಯಂತ ಕಳೆದ 30 ವರ್ಷಗಳಿಂದ ವಿವಿಧ ಜನೋ ಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಮಾಡುತ್ತಿದ್ದು ಈ ಆರ್ಥಿಕ ಸಾಕ್ಷರತಾಕೇಂದ್ರಗಳ ಮೂಲಕ ಇನ್ನೂ ಹೆಚ್ಚಿನ ಜನರನ್ನು ತಲುಪಲು ಸಹಕಾರಿ ಎಂದರು.

ಆರ್ಥಿಕ ಸಾಕ್ಷರತಾ ಯೋಜನೆ ಪ್ರಾದೇಶಿಕ ಸಂಯೋಜಕ ನಾರಾಯಣ ಹೆಗಡೆ ಮಾತನಾಡಿ, ಕೊಳ್ಳೇಗಾಲ ಆರ್ಥಿಕ ಸಾಕ್ಷರತಾ ಕೇಂದ್ರ ಕೊಳ್ಳೇಗಾಲ, ಹನೂರು ಹಾಗೂ ರಾಮಾಪುರ ಭಾಗದ 50 ಪ್ರತಿಶತ ಹಳ್ಳಿಗಳ 30 ಪ್ರತಿಶತ ವಯಸ್ಕ ಜನಸಂಖ್ಯೆಗೆ ಮುಂದಿನ 3 ವರ್ಷ ಆರ್ಥಿಕ ಸಾಕ್ಷರತೆ ಮೂಡಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ಸ್ಟೇಟ್‌ ಬ್ಯಾಂಕ್‌ನ ಅಶ್ವಿ‌ನ್‌ ಕುಮಾರ್‌, ಬ್ಯಾಂಕ್‌ ಆಫ್ ಇಂಡಿಯಾದ ಪ್ರಕಾಶ್‌,ಧಾನ್‌ ಫೌಂಡೇಷನ್‌ ನ ಹುಸೇನ್‌, ಪ್ರಭುಶಂಕರ್‌, ಭಾಗ್ಯಾ, ಶಿವಮೂರ್ತಿ, ಸುಮನ್‌,ಪ್ರಶಾಂತ್‌, ಪವಿತ್ರಾ, ಕವಿತಾ ಹಾಗೂ ವಿವಿಧ ಸ್ವಯಂಸೇವಾ ಸಂಘದ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next