Advertisement

ಚನ್ನಕೇಶವ ದೇಗುಲ ಇಂದು ಉದ್ಘಾಟನೆ

04:49 PM Nov 08, 2019 | Suhan S |

ಹುಣಸೂರು: ಹೊಯ್ಸಳರ ಕಾಲದ ಹುಣಸೂರು ತಾಲೂಕಿನ ಧರ್ಮಾಪುರದ ಚನ್ನಕೇಶವ ಸ್ವಾಮಿ ದೇವಾಲಯವನ್ನು ಕೋಟಿ ರೂ. ವೆಚ್ಚದಡಿ ಜೀರ್ಣೋದ್ಧಾರಗೊಳಿಸಲಾಗಿದ್ದು, ಶುಕ್ರವಾರ ಉದ್ಘಾಟನೆಯಾಗಲಿದೆ.

Advertisement

ಈ ದೇವಾಲಯದ ದೇವರ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮಗಳು ನ. 8, 9 ಮತ್ತು 10ರಂದು ಮೂರು ದಿನಗಳ ಕಾಲ ಜರುಗಲಿವೆ. ವಿವಿಧ ಪೂಜಾ ಕೈಂಕರ್ಯಗಳು ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪ್ರಕಾಲ ಮಠದ ಅಭಿನವ ವಾಗೀವ್‌ ಸ್ವಾಮಿ, ಬೆಂಗಳೂರಿನ ವೈಷ್ಣವ ಮಠದ ತ್ರಿದಂಡಿ ರಾಮಾನುಜಂ ಸ್ವಾಮಿ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ನೆರವೇರಲಿವೆ. ಜೀರ್ಣೋದ್ಧಾರದ ಅಂಗವಾಗಿ ಗೋಪುರ ಕಳಶ ಪ್ರತಿಷ್ಠಾಪನೆ, ಗರುಡಗಂಭ ಸ್ಥಾಪನೆ, ಶ್ರೀ ರಾಮ, ಸೀತಾ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿ ಮತ್ತು ಲಕ್ಷ್ಮೀ ದೇವಿ ಅಮ್ಮನವರ ಶಿಲಾ ವಿಗ್ರಹಗಳ ಪ್ರತಿಷ್ಠಾಪಿಸಲಾಗುತ್ತಿದೆ.

ಶಿಥಿಲಗೊಂಡಿದ್ದ ದೇವಾಲಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾಗಿದ್ದ ಮಂಜುನಾಥ್‌ ಅವಧಿಯಲ್ಲಿ ದೇವಾಲಯ ಜೀರ್ಣೋದ್ಧಾರಕ್ಕಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಿಡುಗಡೆಗೊಳಿಸಿದ್ದ ಒಂದು ಕೋಟಿ ರೂ. ವಿಶೇಷ ಅನುದಾನದಡಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮದ ಎಲ್ಲಾ ಕೋಮಿನವರು ಸೇರಿ ದೇವಾಲಯದ ಪುನರ್‌ ಪ್ರತಿಷ್ಠಾಪನಾ ಕಾರ್ಯ ವನ್ನು ಅದ್ಧೂªರಿಯಿಂದ ನಡೆಸುತ್ತಿದ್ದು, ಸಾಕಷ್ಟು ಇತಿಹಾಸ ಹೊಂದಿರುವ ಈ ದೇವಾಲಯವು ಪ್ರವಾಸೋದ್ಯಮ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ,

ಕಾರ್ಯಕ್ರಮ ವಿವರ:

ಶುಕ್ರವಾರ: ಮುಂಜಾನೆ ಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1.30ರಿಂದ ಶ್ರೀಗಳ ಪಾದಪೂಜೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಸನ್ಮಾನ. ಉಸ್ತುವಾರಿ ಸಚಿವ ಸೋಮಣ್ಣ ಕಾರ್ಯಕ್ರಮ ಉದ್ಘಾಟನೆ, ಅಧ್ಯಕ್ಷತೆ ಮಾಜಿ ಸಚಿವ ಎಚ್‌.ವಿಶ್ವನಾಥ್‌, ವಿಶೇಷ ಆಹ್ವಾನಿತರಾಗಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌, ಶಾಸಕ ಅನಿಲ್‌ ಚಿಕ್ಕಮಾದು, ಸಂಜೆ 5 ರಿಂದ ಚಲನಚಿತ್ರನಟ ಕುಮಾರ್‌ ಅರಸೇಗೌಡ ತಂಡ ದಿಂದ ಹಾಸ್ಯಕಾರ್ಯಕ್ರಮ. ನಂತರ ಹುಣಸೂರಿನ ಕಸ್ತೂರಿ ತಿಲಕ ಭಜನಾ ಮಂಡಳಿಯಿಂದ ಭಜನೆ.

Advertisement

ಶನಿವಾರ: ಬೆಳಗ್ಗೆ 9ಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಶಾಸಕರಾದ ಎಚ್‌.ಪಿ. ಮಂಜುನಾಥ್‌, ಮಹದೇವಪ್ಪ, ಸಿ.ಎಚ್‌. ವಿಜಯಶಂಕರ್‌ ಭಾಗವಹಿಸುವರು. ಧಾರ್ಮಿಕ ಕಾರ್ಯಕ್ರಮ ಮೇಲುಕೋಟೆಯ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್‌, ಮೈಸೂರಿನ ಸಪ್ತಋಷಿ ಗುರುಕುಲ ಆಶ್ರಮದ ರಾಮಾನುಜಸ್ವಾಮಿ, ನಿಟ್ಟೂರು ಮಠದ ರೇಣುಕಾ

ನಂದಸ್ವಾಮಿ, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಗಾವಡಗೆರೆಯ ನಟರಾಜಸ್ವಾಮೀಜಿ ಗಳು ಭಾಗವಹಿಸುವರು. ಸಂಜೆ 4 ರಿಂದ ಕಲ್ಕುಣಿಕೆ ಶ್ರೀನಿವಾಸರ ಆರ್ಕೆಸ್ಟ್ರಾ ತಂಡದಿಂದ ಭಕ್ತಿಗೀತೆ, ರಸಮಂಜರಿ. ರಾತ್ರಿ ಧರ್ಮಾಪುರ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಭಾನುವಾರ: ಬೆಳಗ್ಗೆ 9 ರಿಂದ 12ರ ವರೆಗೆ ಕಲ್ಯಾಣೋತ್ಸವ, ಪ್ರಸಾದ ವಿನಿಯೋಗ, ಧಾರ್ಮಿಕ ಕಾರ್ಯಕ್ರಮ ಬಾಷ್ಯಂ ಸ್ವಾಮೀಜಿ, ಸೋಮೇಶ್ವರ ನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ   ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪಸಿಂಹ, ಶಾಸಕ ಎ.ರಾಮದಾಸ್‌, ಜಿಪಂ ಉಪಾಧ್ಯಕ್ಷೆ ಗೌರಮ್ಮ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್‌ ಮತ್ತಿತರರು ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ದೇವಾಲಯದ ಕುರಿತು ಇತಿಹಾಸ ತಜ್ಞ ಡಾ.ಸೆಲ್ವಪಿಳ್ಳೇ ಐಯಂಗಾರ್‌ರಿಂದ ಪ್ರವಚನ, 3ಕ್ಕೆ ಸಮಾರೋಪ ಸಮಾರಂಭ, ಸಂಜೆ 4.30ರಿಂದ ಜೀ ಕನ್ನಡ ವಾಹಿನಿಯ ಸರಿಗಮಪ ತಂಡದಿಂದ ರಸಮಂಜರಿ ಕಾರ್ಯಕ್ರಮ.

 

-ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next