Advertisement
ಮಾ. 10 ರಂದು ಪೂರ್ವಾಹ್ನ ವಿಕ್ರೋಲಿ ಪೂರ್ವದ ಜೆ. ಕೆ. ಟವರ್‌ನಲ್ಲಿ ಮೋಡೆಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ 22ನೇ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶಾಖೆ ಯನ್ನು ರಿಬ್ಬನ್ ಕತ್ತರಿಸಿ ನಂತರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಶಾಖೆಯು ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಹಾರೈಸಿದರು.ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬುÉÂ.ಡಿ’ಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂ ಭದಲ್ಲಿ ವಿಕ್ರೋಲಿ ಪಶ್ಚಿಮದ ಸೈಂಟ್ ಜೋಸೆಫ್ ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ರೋಕಿ ಬಾನ್l ಅವರು ಆಶೀರ್ವಚನ ನೀಡಿ, ಹಣಕಾಸು ವ್ಯವಹಾರ ಒಂದು ವಿಶ್ವಾಸನೀಯ ಸೇವೆಯಾಗಿದೆ. ಇದೊಂದು ಇತರರಿಗೆ ಉಪಕಾರವಾಗುವ ಸೇವೆ. ಪರಿಶ್ರಮದಿಂದ ಗಳಿಸಿದ ಹಣವನ್ನು ನೆಮ್ಮದಿಯ ಜೀವನಕ್ಕೆ ಮತ್ತು ನಿವೃತ್ತ ಬಾಳಿಗೆ ರಕ್ಷಿಸಲ್ಪಡುವ ಯೋಚನೆ ಪ್ರತಿಯೊಬ್ಬರಲ್ಲಿದ್ದು ಅನೇಕರು ಉದ್ಯಮ ವೃದ್ಧಿಗಾಗಿ ಹಣದ ಜಾಗರೂಕತೆ ಮಾಡುತ್ತಾರೆ. ಇವರಿಗೆ ಬ್ಯಾಂಕ್‌ಗಳು ಸೂಕ್ತವಾದ ಸಲಹೆ ಮತ್ತು ಸುರಕ್ಷೆ ನೀಡಬೇಕು. ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಜನತೆಯೂ ಹಣಕಾಸು ವಿಷಯದಲ್ಲಿ ಸುಶಿಕ್ಷಿತರಾಗಬೇಕು ಎಂದರು.
ಬ್ಯಾಂಕ್‌ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವ ಮಾತನಾಡಿ, ಇದೊಂದು ದೊಡ್ಡ ಸಹಕಾರಿ ಬ್ಯಾಂಕ್. 1994ರಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಶಾಖೆಗಳನ್ನು ಸ್ಥಾಪಿಸಿತ್ತು. ಶೀಘ್ರವೇ ಇಪ್ಪತ್ತೆ„ದು ಶಾಖೆಗಳನ್ನು ಹೊಂದುತ್ತ ದೊಡ್ಡ ಬ್ಯಾಂಕ್ ಆಗಿ ಪರಿವರ್ತನೆ ಆಗಲಿದೆ. ವರ್ಷಗಳು ಕಳೆದಂತೆ ಸಾರ್ವಜನಿಕ ಬ್ಯಾಂಕಿನಲ್ಲಿ ಬದಲಾವಣೆಗಳು ಹೆಚ್ಚುತ್ತವೆ. ಅದರ ಸದುಪಯೋಗ ಸ್ಥಾನೀಯ ಜನತೆ ಪಡೆಯಬೇಕು. ಮತ್ತು ಉದ್ಯಮಶೀಲರಾಗುವ ಪ್ರಯತ್ನ ನಡೆಸಬೇಕು ಎಂದರು.
ಬ್ಯಾಂಕ್‌ನ ನಿರ್ದೇಶಕ, ಶಾಖಾ ಉಸ್ತುವಾರಿ ಲಾರೇನ್ಸ್ ಡಿ’ಸೋಜಾ ಮಾತನಾಡಿ, ನಿಮ್ಮ ವ್ಯವಹಾರ ಪಾಲುದಾರ ಎಂಬ ಧ್ಯೇಯದಂತೆ ನಮ್ಮ ಬ್ಯಾಂಕಿನ ಲಾಂಛನವೇ ಹೇಳುವಂತೆ ಗ್ರಾಹಕರ ಸಂತೃಪ್ತಿಕರ ಸೇವೆಯಲ್ಲಿ ಈ ಬ್ಯಾಂಕ್ ಸಾಧನೆಗೈಯುತ್ತಿದೆ. ವರ್ಷದಿಂದ ವರ್ಷ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುತ್ತಿದೆ. ನೆರೆದ ಸರ್ವರೂ ಗಳಿಕೆಯನ್ನು ಉಳಿತಾಯವನ್ನಾಗಿ ಈ ಬ್ಯಾಂಕಿನೊಂದಿಗೆ ವ್ಯವಹರಿಸಿ ಸಹಕರಿಸಿ ಎಂದರು.
ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಮತ್ತು ಬ್ಯಾಂಕಿನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್. ಡಿ’ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತಕಾರ ವಿಲ್ಫೆÅಡ್ ಫೆರ್ನಾಂಡಿಸ್, ಬಾಂಬೇ ಕೆಥೋಲಿಕ್ ಸಭಾ ಇದರ ಉಪಾಧ್ಯಕ್ಷ ರೋಬರ್ಟ್ ಡಿ’ಸೋಜಾ, ಮಾರಿಯೋ ರೋಡ್ರಿಗಸ್, ನ್ಯಾಯವಾದಿ ವಿನ್ಸೆಂಟ್ ಪಿರೇರ, ಸ್ಥಾನೀಯ ಸಮಾಜ ಸೇವಕರಾದ ಎಸ್. ಮಿನೇಜಸ್, ವಿಕಾಸ್ ರಾವ್, ಶೇಖರ್ ಪಿ. ತಾಬ್ಡೆ, ಕಟ್ಟಡದ ಮಾಲೀಕ ಸಿ. ಬಿ. ಸಿಂಗ್, ಜಯಂತ್ ರೆಡೇಕರ್, ಬ್ಯಾಂಕಿನ ನಿರ್ದೇಶಕರುಗಳಾದ ಸಿಎ| ಪೌಲ್ ನಝರೆತ್, ಪ್ರೊ| ಎ. ಪಿ. ಡಿ’ಸೋಜಾ, ಲಾಜರಸ್ ಮಿನೇಜಸ್, ಫಿಲಿಪ್ ಎಲ್. ಎಸ್. ಪಿಂಟೋ, ತೋಮಸ್ ಡಿ.ಲೋಬೊ, ಅಬ್ರಹಾಂ ಕ್ಲೇಮೆಂಟ್ ಲೊಬೋ, ಸಂಜಯ್ ಶಿಂಧೆ, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿ’ಮೆಲ್ಲೋ, ಜೆರಾಲ್ಡ್ ಕಡೋìಜಾ, ಆ್ಯನ್ಸಿ ಡಿ’ಸೋಜಾ, ಬ್ಯಾಂಕಿನ ಹಿರಿಯ ಪ್ರಬಂಧಕರುಗಳಾದ ಝೆನೆರ್ ಡಿ’ಕ್ರೂಜ್ ಸೇರಿದಂತೆ ನೂತನ ಗ್ರಾಹಕರು, ಷೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶಾಖೆಯ ಉನ್ನತಿಗೆ ಶುಭಕೋರಿದರು. ಆಲ್ಬರ್ಟ್ ಡಿ’ಸೋಜಾ ಸ್ವಾಗತಿಸಿದರು. ಎಡ್ವರ್ಡ್ ರಸ್ಕೀನ್ಹಾ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕ ಮೆರ್ವಿನ್ ಲೊಬೋ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್