Advertisement

Thekkatte: ಸಂಸ್ಕೃತಿ ಉಳಿಯಲು ಸಂಕೀರ್ತನೆ ಅಗತ್ಯ: ಚಿತ್ರಾಪುರ ಶ್ರೀ

09:27 AM Dec 04, 2023 | Team Udayavani |

ತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ನೇತೃತ್ವದಲ್ಲಿ ಕುಂದಾಪುರ ಭಜನ ಮಂಡಳಿಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕುಣಿತ ಭಜನ ಸ್ಪರ್ಧೆ, ಭಕ್ತಿಗಾನ ನೃತ್ಯ ಜೋಡಿ ಭಜನ ಸ್ಪರ್ಧೆಯನ್ನು ಸುರತ್ಕಲ್‌ನ ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರ ತೀರ್ಥ ಶ್ರೀಪಾದರು ಡಿ. 3ರಂದು ಉದ್ಘಾಟಿಸಿದರು.

Advertisement

ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಪಾದರು, ಕಲಿಯುಗದಲ್ಲಿ ಪುಣ್ಯ ಸಾಧನೆ ಹಾಗೂ ದೇವರ ಅನುಗ್ರಹ ಪಡೆಯಲು ದೇವರ ಸಂಕೀರ್ತನೆ ಮಾಡುವುದು ಅಗತ್ಯ, ಮನೆ ಮನಗಳಲ್ಲಿ ಸಂಕೀರ್ತನೆ ಮಾಡುವ ಮೂಲಕ ನಮ್ಮ ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕಾಗಿದೆ. ಭಜನೆ ಅಂದರೆ ಅದರಲ್ಲಿ ವಿಭಜನೆ ಎನ್ನುವುದಿಲ್ಲ ಬದಲಾಗಿ ಒಗ್ಗಟ್ಟನ್ನು ಕಲಿಸಿಕೊಡುತ್ತದೆ. ನಾವು ಒಗ್ಗಟ್ಟಾಗಿದ್ದರೆ ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸಮರ್ಥರಾಗುತ್ತೇವೆ ಎಂದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅವರು ಪುರಮೆರವಣಿಗೆಗೆ ಚಾಲನೆ ನೀಡಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ದೇವರನ್ನು ಸುಲಭ ಮಾರ್ಗದಲ್ಲಿ ಕಾಣುವ ಸಾಧನವೇ ಭಜನೆ. ಭಗವಂತನನ್ನು ಕಾಣಲು ಯಾಗ, ಹವನಗಳನ್ನು ಮಾಡಿದರೆ ಸಾಲದು ಬದಲಾಗಿ ಆತನ ಒಲುಮೆಗೆ ಭಜನೆಯೇ ಪ್ರಮುಖ ಸಾಧನವಾಗಿದೆ ಎಂದರು.
ದೇಗುಲದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಂತನ ಅನುಗ್ರಹ ಪಡೆಯಲು ಮಾಡುವ ಧಾರ್ಮಿಕ ಕಾರ್ಯಕ್ರಮವೇ ಭಜನೆ ಎಂದು ಹೇಳಿದರು.

ರಾಜ್ಯಮಟ್ಟದ ಕುಣಿತ ಭಜನ ಸ್ಪರ್ಧೆಯ ಸಮಿತಿಯ ಅಧ್ಯಕ್ಷ, ಮಲ್ಯಾಡಿ ಶಿವರಾಮ ಶೆಟ್ಟಿ, ಕುಂಭಾಶಿ ಗ್ರಾ. ಪಂ. ಅಧ್ಯಕ್ಷ ಆನಂದ ಪೂಜಾರಿ, ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್‌ ಚಾರಿಟೆಬಲ್‌ ಟ್ರಸ್ಟ್‌ನ ಪ್ರವರ್ತಕ ಕೊರ್ಗಿ ವಿಠಲ ಶೆಟ್ಟಿ, ಬಸವರಾಜ್‌ ಶೆಟ್ಟಿಗಾರ್‌, ಕೋಟೇಶ್ವರ ಶ್ರೀರಾಮ ಕಲಾ ಸಂಘದ ಅಧ್ಯಕ್ಷ ಸೀತಾರಾಮ ಧನ್ಯ ಗೋಪಾಡಿ, ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಜಯಾನಂದ ಖಾರ್ವಿ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ರಾಘವೇಂದ್ರ ಶೆಟ್ಟಿಗಾರ್‌ ಸ್ವಾಗತಿಸಿ,

Advertisement

ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರೂಪಿಸಿ ದರು.ವ್ಯವಸ್ಥಾಪಕ ನಟೇಶ್‌ ಕಾರಂತ್‌ ಸಹಕರಿಸಿ, ಬಾಬಣ್ಣ ಪೂಜಾರಿ ವಂದಿಸಿದರು.

ಇದನ್ನೂ ಓದಿ: Katapady ಶ್ರೀ ವಿಶ್ವನಾಥ ಕ್ಷೇತ್ರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next