Advertisement

ಶಿರಸಿ: ರಾಗಂ ಸೇವಾ ಸಂಸ್ಥೆ ಉದ್ಘಾಟನೆ, ಕೃತಿ ಬಿಡುಗಡೆ, ಸಮ್ಮಾನ

07:56 PM Jul 20, 2022 | Team Udayavani |

ಶಿರಸಿ: ಶೈಕ್ಷಣಿಕ ಮತ್ತು ಸಮಾಜ ಸೇವಾ ಸಂಸ್ಥೆ ರಾಗಂ ಟ್ರಸ್ಟ್ ಉದ್ಘಾಟನೆ, ರಾಗಂ ಕರಿಯರ್ ಕೋಚಿಂಗ್ ಅಕಾಡಮಿ ಶುಭಾರಂಭ, ಸಾಧಕರಿಗೆ ಸಮ್ಮಾನ, ಕೃತಿ ಬಿಡುಗಡೆ ಸಮಾರಂಭ ಜು.24 ರ ಬೆಳಿಗ್ಗೆ 10:30 ರಿಂದ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

Advertisement

ಈ ವಿಷಯ ತಿಳಿಸಿದ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ನಾಯ್ಕ ಗುಡ್ನಾಪುರ, ಕಾರ್ಯಕ್ರಮವನ್ನು ಹೆಸ್ಕಾಂ ಅಧೀಕ್ಷಕ ದೀಪಕ ಕಾಮತ್ ಉದ್ಘಾಟನೆ ಮಾಡಲಿದ್ದು, ಗಂಗಾಧರ ನಾಯ್ಕ ಪುರದಮಠ ಅವರ ಬಿಡುಗಡೆ ಆಗಲಿರುವ ಹನಿ ಹನಿ ಸೇರಿದಾಗ ಕೃತಿಯ ಕುರಿತು ವಿಮರ್ಶಕ ಸುಬ್ರಾಯ‌ ಮತ್ತೀಹಳ್ಳಿ‌ ಮಾತನಾಡಲಿದ್ದಾರೆ. ಬಳಿಕ ಕೃತಿಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಕೆ. ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಗಂ ಕರಿಯರ ಕೋಚಿಂಗ್ ನ್ನು ದಕ್ಷಿಣ ಕನ್ನಡದ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಉದ್ಘಾಟನೆ ಮಾಡಲಿದ್ದಾರೆ. ತುಮಕೂರಿನ ಅಪರ‌ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ., ಸಹಾಯಕ ಆಯುಕ್ತ ಆರ್.ದೇವರಾಜ, ಡಿವೈಎಸ್ಪಿ ರವಿ ನಾಯ್ಕ, ತಹಸೀಲ್ದಾರ ಶ್ರೀಧರ ಮುಂದಲಮನಿ ಪಾಲ್ಗೊಳ್ಳಲಿದ್ದಾರೆ.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸಮ್ಮಾನಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಯುಪಿಎಸ್ಸಿಯಲ್ಲಿ 213 ನೇ ರ್ಯಾಂಕ್ ಪಡೆದ ಮನೋಜ ರಾಮನಾಥ ಹೆಗಡೆ, ವಿಶ್ವಶಾಂತಿ ಯಕ್ಷನೃತ್ಯ ರೂಪಕದ ಬಾಲೆ ತುಳಸಿ ಹೆಗಡೆ ಶಿರಸಿ, ಬಾಲಕಿಯರ ಬ್ಯಾಡ್ಮಿಂಟನ್ ವಿಶ್ವ ಚಾಂಫಿಯನ್ ಪ್ರೇರಣಾ ನಂದ ಕುಮಾರ ಶೇಟ್ ಅವರನ್ನು ಸಮ್ಮಾನಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿರಾಗ ಮಹೇಶ ನಾಯ್ಕ, ದೀಕ್ಷಾ ರಾಜು ನಾಯ್ಕ, ಲತಾ ಎನ್ ಸವಣೂರು, ಶರ್ಮಿನ್ ಎಂ.ಶೇಖ್, ಕನ್ನಿಕಾ ಪರಮೇಶ್ವರ ಹೆಗಡೆ ಅವರನ್ನು ಸಮ್ಮಾನಿಸಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟನ ಮಾರ್ಗದರ್ಶಕ ಟಿ.ಬಿ.ನಾಯ್ಕ ಗುಡ್ನಾಪುರ ಅವರು ವಹಿಸಿ ಕೊಳ್ಳಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಕಾರ್ಯದರ್ಶಿ ಸವಿತಾ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next