Advertisement

ಕುತ್ಯಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

07:01 PM Feb 24, 2023 | Team Udayavani |

ಶಿರ್ವ: ಸುಮಾರು 23.5 ಲ. ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕುತ್ಯಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆಯು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಫೆ.24 ರಂದು ನಡೆಯಿತು.

Advertisement

ನೂತನ ಕಟ್ಟಡವನ್ನು ಉದ್ಘಾಟಿಸಿದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೊಡವೂರು ರವಿರಾಜ್‌ ಹೆಗ್ಡೆ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯು ಆದಾಯದ ಮೂಲವಾಗಿದ್ದು,ಯುವಜನತೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಹೈನುಗಾರರು ಸಂಕಷ್ಟದಲ್ಲಿದ್ದು,ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಸಿಗುವಂತೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಎಸ್‌.ಆಚಾರ್ಯ ನೂತನ ಸಭಾಂಗಣವನ್ನು ಉದ್ಘಾಟಿಸಿದರು.ಕುತ್ಯಾರು ಅರಮನೆಯ ಜಿನೇಶ್‌ ಬಲ್ಲಾಳ್‌ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ , ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ,ಎಸ್‌. ಪ್ರಕಾಶ್ಚಂದ್ರ ಶೆಟ್ಟಿ,ನರಸಿಂಹ ಕಾಮತ್‌,ಎಂ. ಸುಧಾಕರ ಶೆಟ್ಟಿ,ಬೋಳ ಸದಾಶಿವ ಶೆಟ್ಟಿ ಮತ್ತು ನಿರ್ದೇಶಕಿ ಸ್ಮಿತಾ ಆರ್‌. ಶೆಟ್ಟಿ ಮಾತನಾಡಿದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ,ಉಪ ವ್ಯವಸ್ಥಾಪಕ ಡಾ| ಅನಿಲ್‌ ಕುಮಾರ್‌ ಶೆಟ್ಟಿ,ವಿಸ್ತರಣಾಧಿಕಾರಿ ಯಶವಂತ್‌, ಶಿರ್ವ ಸಹಕಾರಿ ವ್ಯವಸಾಯಿಕ ಬ್ಯಾಂಕ್‌ನ ಅಧ್ಯಕ್ಷ ಕುತ್ಯಾರು ಪ್ರಸಾದ್‌ ಶೆಟ್ಟಿ, ಸಂಘದ ಉಪಾಧ್ಯಕ್ಷೆ ಆಗ್ನೇಸ್‌ ಬೆನ್ನಿ ಮತಾಯಸ್‌ ವೇದಿಕೆಯಲ್ಲಿದ್ದರು.

Advertisement

ಉಡುಪಿ ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ,ವಿದ್ವಾನ್‌ ಶಂಭುದಾಸ ಗುರೂಜಿ, ಸಂಘದ ನಿರ್ದೇಶಕರಾದ ಲಿಲ್ಲಿ ಡಿಸೋಜಾ, ಸರೋಜಿನಿ ಸಿ. ಭಂಡಾರಿ, ಭಾರತಿ, ಗೀತಾ, ರತ್ನಾವತಿ ಆಚಾರ್ಯ, ಗೀತಾ ನಾಯ್ಕ, ವನಜ ಶೆಟ್ಟಿ, ಶಾಲಿನಿ, ಹಾಲು ಪರೀಕ್ಷಕಿ ಮಮತಾ,ಸಹಾಯಕಿ ಪೂರ್ಣಿಮಾ,ಕುತ್ಯಾರು ಗ್ರಾ.ಪಂ. ಸದಸ್ಯರು, ಪರಿಸರದ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷೆ ಪದ್ಮಾವತಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಧೀರಜ್‌ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ವರದಿ ವಾಚಿಸಿ, ವಂದಿಸಿದರು.

ಇದನ್ನೂ ಓದಿ: ರಾಜಾರಾಂ ಅಲ್ಲ, ಕುಮಾರಸ್ವಾಮಿಯೇ ನಿಮ್ಮ ಅಭ್ಯರ್ಥಿ ಎಂದು ಮತ ನೀಡಿ: ತೀರ್ಥಹಳ್ಳಿಯಲ್ಲಿ HDK

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next