Advertisement

Udupi: ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟನೆ

07:11 PM Aug 07, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ವತಿಯಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ನಡೆಯಿತು.

Advertisement

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಎಂಐಟಿ ನಿವೃತ್ತ ಪ್ರಾಧ್ಯಾಪಕ ನಾರಾಯಣ ಶೆಣೈ, ವೈದ್ಯ ಡಾ| ವಿಜಯೇಂದ್ರ ಅವರು ಕೈಮಗ್ಗ ಮತ್ತು ಗುಡಿಕೈಗಾರಿಕೆಯ ಮಹತ್ವದ ಬಗ್ಗೆ ಪದ್ಮಶಾಲಿ ಸಮುದಾಯದ ಕೊಡುಗೆ ಬಗ್ಗೆ ಮಾತನಾಡಿದರು.

ಮಾಜಿ ಶಾಸಕ ಕೆ. ರಘುಪತಿ ಭಟ್‌, ನಗರಸಭೆ ಸದಸ್ಯರಾದ ಪ್ರಭಾಕರ್‌ ಪೂಜಾರಿ, ಕೃಷ್ಣರಾವ್‌ ಕೊಡಂಚ, ರಜನಿ ಹೆಬ್ಟಾರ್‌, ವಿಜಯ ಕೊಡವೂರು, ಆಯೋಜನ ಸಮಿತಿ ಅಧ್ಯಕ್ಷ ಚಂದನ್‌ ಶೆಟ್ಟಿಗಾರ್‌, ಪದ್ಮಶಾಲಿ ಸಮಾಜದ ದೇವಸ್ಥಾನಗಳ ಪ್ರಮುಖರಾದ ಜ್ಯೋತಿ ಪ್ರಸಾದ್‌ ಶೆಟ್ಟಿಗಾರ್‌ ಕಿನ್ನಿಮೂಲ್ಕಿ, ಸುರೇಶ್‌ ಶೆಟ್ಟಿಗಾರ್‌ ಸಾಲಿಕೇರಿ, ಗಣೇಶ್‌ ಶೆಟ್ಟಿಗಾರ್‌ ಗೋಳಂಗಡಿ, ಓಂಪ್ರಕಾಶ್‌ ಶೆಟ್ಟಿಗಾರ್‌, ಪ್ರಭಾಶಂಕರ್‌ ಪದ್ಮಶಾಲಿ, ಜಯಕರ್‌ ಶೆಟ್ಟಿಗಾರ್‌, ವಿವೇಕ್‌ ಪಿ. ಎಸ್‌. , ಸುಂದರ್‌ ಶೆಟ್ಟಿಗಾರ್‌, ಹರೀಶ್ಚಂದ್ರ ಶೆಟ್ಟಿಗಾರ್‌, ಮನೋಹರ್‌ ಶೆಟ್ಟಿಗಾರ್‌, ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜಾ ಯಶವಂತ್‌, ಪ್ರಮುಖರಾದ ನರೇಂದ್ರ ಶೆಟ್ಟಿಗಾರ್‌ ಹೆರ್ಗ, ಶ್ರೀನಿವಾಸ್‌ ಶೆಟ್ಟಿಗಾರ್‌, ಅನುರಾಧಾ ಶೆಟ್ಟಿಗಾರ್‌, ಶೋಭಾ ಜ್ಯೋತಿ ಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್‌ ಇಂದ್ರಾಳಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಮಂಜುನಾಥ್‌ ಮಣಿಪಾಲ ಸ್ವಾಗತಿಸಿ, ಸದಾಶಿವ ಗೋಳಿಜೊರ ನಿರೂಪಿಸಿದರು.

Advertisement

 

ಕಾರ್ಯಕ್ರಮದಲ್ಲಿ ಬ್ರಾಂಡ್‌ ಲಿನನ್‌ ಶರ್ಟಿಂಗ್‌ ಅನಾವರಣ ಮಾಡಲಾಯಿತು. ಉಡುಪಿ ಹ್ಯಾಂಡ್‌ ಲೂಮ್‌ ವರ್ಲ್ಡ್ನ ಕೈಮಗ್ಗ ಪ್ರೀಮಿಯಂ ಸೀರೆಗಳ ಬಿಡುಗಡೆ, ನೇಕಾರಿಕೆಗೆ ಬನ್ನಿ ಎನ್ನುವ ಪರಿಕಲ್ಪನೆಯಲ್ಲಿ ನೇಕಾರರಿಗೆ ಮಾಸಿಕ ಹತ್ತು ಸಾವಿರ ರೂ.ಗಳ ಕನಿಷ್ಠ ವೇತನ ಖಾತರಿ ಯೋಜನೆಗೆ ಚಾಲನೆ ನೀಡಲಾಯಿತು. ನೇಕಾರ ಪೋಷಕ ಕೈಮಗ್ಗ ದಾನಿಗಳಿಗೆ ಗೌರವಿಸಲಾಯಿತು. ಸಮರ್ಥ್ ಕೇಂದ್ರ ಸರಕಾರದ ನೇಕಾರ ಸೇವಾ ಕೇಂದ್ರ ಪ್ರಾಯೋಜಿತ ಕೈಮಗ್ಗ ತರಬೇತಿ ಕಾರ್ಯಾಗಾರದ ನೂತನ ಬ್ಯಾಚ್‌ನ ಉದ್ಘಾಟನೆ ನಡೆಯಿತು. 20 ಮಹಿಳಾ ನೇಕಾರರಿಗೆ ಒಂದು ಉಡುಪಿ ಸೀರೆಗೆ ತಲಾ ಮುನ್ನೂರು ರೂ. ಗಳಂತೆ ಸುಮಾರು ಎರಡೂವರೆ ಲ. ರೂ. ಗಳ ಪ್ರೋತ್ಸಾಹ ಧನ ವಿತರಿಸಿ, ಹಿರಿಯ ನೇಕಾರರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next