Advertisement

ಮಹಾಕಾವ್ಯ ರಾಮಾಯಣ ಎಂದಿಗೂ ಪ್ರಸ್ತುತ: ಸಚಿವ

04:31 PM Oct 22, 2021 | Team Udayavani |

ಚಿಕ್ಕಬಳ್ಳಾಪುರ: ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಶ್ರೇಷ್ಠ ಮಹಾಕಾವ್ಯವಾಗಿದೆ. ಮನುಷ್ಯ ಭೂಮಿ ಮೇಲೆ ಇರುವವರೆಗೂ ಈ ಕಾವ್ಯವು ಪ್ರಸ್ತುತವಾಗಿರಲಿದೆ ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ಪಂಗಡ ಇಲಾಖೆ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಜ್ಞಾನಾರ್ಜನೆ ಮೂಲಕ ಉನ್ನತ ಸಾಧನೆ ಮಾಡಲು ರಾಮಾಯಣ ಕಾವ್ಯ ಪ್ರೇರಣೆ ಯಾಗಿದೆ ಎಂದು ಹೇಳಿದರು.

ರಾಮಾಯಣ ಆಳವಾಗಿ ಆಧ್ಯಯನ ಮಾಡಿ: ರಾಮಾಯಣ ಮಹಾಕಾವ್ಯದಲ್ಲಿ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಮೌಲ್ಯಾದರ್ಶಗಳಿದ್ದು, ಪ್ರತಿಯೊಬ್ಬರೂ ಇದನ್ನು ಆಳವಾಗಿ ಅಧ್ಯಯನ ಮಾಡಿ, ವಾಲ್ಮೀಕಿ ಆದರ್ಶ ಚಿಂತನೆ ಅನುಸರಿಸುವ ಅಗತ್ಯವಿದೆ. ಸ್ವಾಮಿ ನಿಷ್ಠೆ, ಸೋದರ ನಿಷ್ಠೆ, ಪತಿ ನಿಷ್ಠೆ, ಪತ್ನಿ ನಿಷ್ಠೆ, ಪಿತೃ ವಾಕ್ಯ ಪರಿಪಾಲನೆ ಸೇರಿ ಹಲವು ರೀತಿಯ ನಿಷ್ಠೆಗಳು ಈ ಕಾವ್ಯದಲ್ಲಿ ಕಾಣ ಸಿಗುತ್ತವೆ ಎಂದು ಸಚಿವರು ಮೆಲುಕು ಹಾಕಿದರು.

27 ಸಾವಿರ ಕೋಟಿ ರೂ. ಮೀಸಲು:

ಬಲಹೀನ ತಳ ಸಮುದಾಯಗಳ ಯುವಕರು ಉದ್ಯಮ ಆರಂಭಿಸಿ ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶಕ್ಕಾಗಿ 10 ಲಕ್ಷ ರೂ.ನಿಂದ 1 ಕೋಟಿ ರೂ. ವರೆಗೆ ಸಾಲ ನೀಡುವ ಸ್ಟಾಂಡ್‌ ಅಪ್‌ ಇಂಡಿಯಾ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದಕ್ಕಾಗಿ 27 ಸಾವಿರ ಕೋಟಿ ರೂ. ಸರ್ಕಾರ ಮೀಸಲಿಟ್ಟಿದೆ ಎಂದು ವಿವರಿಸಿದರು.

Advertisement

ಜಿಲ್ಲಾ ವಾಲ್ಮೀಕಿ ಭವನ ನಿರ್ಮಿಸುವ ಉದ್ದೇಶ ಕ್ಕಾಗಿ ಚಿಕ್ಕಬಳ್ಳಾಪುರ ನಗರದ ಹೃದಯ ಭಾಗದಲ್ಲಿ 30 ಗುಂಟೆ ಜಮೀನು ಮಂಜೂರಾತಿ ಆದೇಶ ಪತ್ರವನ್ನು ಇಲಾಖೆಗೆ ಹಸ್ತಾಂತರಿಸಿದರು.

ಇದನ್ನೂ ಓದಿ;- ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಾಧಕರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಟಿ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸ ಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌. ಲತಾ, ಜಿಪಂ ಸಿಇಒ ಪಿ.ಶಿವಶಂಕರ್‌, ಎಸ್ಪಿ ಮಿಥುನ್‌ಕುಮಾರ್‌, ನಗರಸಭೆ ಅಧ್ಯಕ್ಷ ಡಿ.ಎಸ್‌. ಅನಂದ್‌ರೆಡ್ಡಿ, ಶಿಡ್ಲಘಟ್ಟ ಮಾಜಿ ಶಾಸಕ ರಾಜಣ್ಣ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಧರ್‌, ಚಿಕ್ಕಬಳ್ಳಾಪುರ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಕೆ.ವಿ.ಗವಿರಾಯಪ್ಪ, ಖಜಾಂಚಿ ಕೆ.ಎನ್‌. ಆವಲಕೊಂಡರಾಯಪ್ಪ, ಸಂಘಟನಾ ಕಾರ್ಯದರ್ಶಿ ಮುನಿವೆಂಟಕಸ್ವಾಮಿ, ಸದಸ್ಯರಾದ ನರಸಿಂಹ ರಾಜು, ಸಮುದಾಯದ ಮುಖಂಡರಾದ ಶ್ರೀನಿ ವಾಸ್‌, ಭೂಅಭಿವೃದ್ಧಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಟಿ. ನಾರಾಯಣಸ್ವಾಮಿ, ಪಿ.ಮುನಿರಾಜು ( ಜಿಪಂ ಮಾಜಿ ಸದಸ್ಯರು), ಮುನಿಕೃಷ್ಣ (ಚಿಕ್ಕಬಳ್ಳಾ ಪುರ ನಗರಸಭೆ ಮಾಜಿ ಅಧ್ಯಕ್ಷ), ಚಿಕ್ಕಬಳ್ಳಾಪುರ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಜಿ.ಮೂರ್ತಿ, ಉಪಾಧ್ಯಕ್ಷ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next