Advertisement

”ಕ್ಷೇಮವನ”ಕಟ್ಟಡ ಉದ್ಘಾಟನೆ : ನೆಲಮಂಗಲದಲ್ಲಿ ಯುಪಿ ಸಿಎಂ ಯೋಗಿ

02:17 PM Sep 01, 2022 | Team Udayavani |

ನೆಲಮಂಗಲ: ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ & ಯೋಗಿಕ್ ಸೈನ್ಸಸ್ ಕ್ಯಾಂಪಸ್‌ ನಲ್ಲಿ ನೂತನವಾಗಿ ನಿರ್ಮಾಣವಾಗಿರುವ   ಕ್ಷೇಮವನ ಕಟ್ಟಡವನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗುರುವಾರ ಉದ್ಘಾಟನೆ ಮಾಡಿದರು.

Advertisement

ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ & ಯೋಗಿಕ್ ಸೈನ್ಸ್ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸೇರಿ ಗಣ್ಯರು ಭಾಗಿಯಾಗಿದ್ದರು.

ಸಿಎಂ ಬೊಮ್ಮಾಯಿ ಅವರು ಯೋಗಿ ಆದಿತ್ಯನಾಥ್ ನರನ್ನ ಹೊಗಳಿ ಸ್ಚಾಗತಿಸಿ, ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳು.ಯೋಗಿ ಆದಿತ್ಯನಾಥ್ ದಕ್ಷ ಪ್ರಮಾಣಿಕ ಹಾಗೂ ಯಶಸ್ವಿ ಸಿಎಂ ಎಂದು ಬಣ್ಣಿಸಿದರು.
ಯೋಗಿ ಅವರು ಬಂದಿದ್ದು ಹೆಮ್ಮೆ ಮತ್ತು ಬಹಳಷ್ಟು ಸಂತೋಷವಾಗಿದೆ. ಕರ್ನಾಟಕಕ್ಕೂ ಅವರಿಗೂ ಸಂಬಂಧವಿದೆ. ಉತ್ತರ ಕರ್ನಾಟಕ ಮತ್ತು ಈ ಭಾಗದಲ್ಲಿ ಅವರ ಎಲ್ಲರ ಮನದಲ್ಲಿ ಇದ್ದಾರೆ‌‌. ಯಾಕೆಂದರೆ ಅವರು ಮೊದಲು ಗುರುಗಳಾಗಿದ್ದರು. ನಮ್ಮ ಸಮಾಜದಲ್ಲಿ ಗುರುಗಳಿಗೆ ಉನ್ನತ ಸ್ಥಾನವಿದೆ‌. ಇವರು ನಡೆದಂತೆ ನಡೆದಿದ್ದಾರೆ. ಒಬ್ಬರು ಸ್ವಾಮೀಜಿ ದಕ್ಷ ಆಡಳಿತಗಾರ ಎಂದು ತೋರಿಸಿದ್ದಾರೆ ಎಂದರು.

ಆಧ್ಯಾತ್ಮಿಕತೆ ಮತ್ತು ಆಡಳಿತ (Spirituality and administration)ಎರಡು ಮಾಡಬಹುದು ಎಂದು ಯೋಗಿ ತೊರಿಸಿಕೊಟ್ಟಿದ್ದಾರೆ.ದುಷ್ಟರಿಗೆ ರಕ್ಷಣೆ ಇಲ್ಲ, ಶಿಷ್ಟರಿಗೆ ಪರಿಪಾಲನೆ ಆಗುತ್ತಿದೆ‌. ಕನ್ನಡ ನಾಡಿಗೆ ಬಹಳ ಸಂತೋಷವಾಗಿದೆ ಎಂದರು.

”ಕ್ಷೇಮವನ” ಎಂಬ ಹೆಸರಿನಲ್ಲೇ ನೆಮ್ಮದಿ ಇದೆ. ಮೊದಲೆಲ್ಲ ಪೋಸ್ಟ್ ಕಾರ್ಡ್ ನಲ್ಲಿ ಕ್ಷೇಮ ಎಂದು ಬರೆಯುತ್ತಿದ್ದರು. ಆರೋಗ್ಯ ಮತ್ತು ಕ್ಷೇಮ ಎಂದು ನಮ್ಮ ಹಿರಿಕರು ಹೇಳಿದ್ದರು. ಆದರೆ ನಾವು ಅದನ್ನ ಉಲ್ಟಾ ಪಲ್ಟಾ ಮಾಡಿದ್ದೇವೆ.ಕ್ಷೇಮ ಬಿಟ್ಟು ಎಲ್ಲಾ ರೂಡಿಸಿಕೊಂಡಿದ್ದೇವೆ. ಅತ್ಮ ಮತ್ತು ದೇಹವನ್ನ ನೈಸರ್ಗಿಕ ಶುದ್ದೀಕರಣವಾಗಿರುಸುವುದೇ ಕ್ಷೇಮವನ.ಈ ವನದಲ್ಲಿ ಧರ್ಮವೂ ಸೇರಿಕೊಂಡಿದೆ. ಸ್ಥಿತಪ್ರಜ್ಞೆರಾಗುವುಂತೆ ಈ ಕ್ಷೇಮವನ ಮಾಡಲಿದೆ ಎಂದು ಈ ವನ ನೋಡಿದ ಮೇಲೆ ಗೊತ್ತಾಯಿತು. ಸ್ತ್ರಿಶಕ್ತಿ ಸಂಘಗಳನ್ನ ಬೆಳಸಿದ್ದಾರೆ ಅವರ ಬಾಳಿನಲ್ಲಿ ಬೆಳಗು ತಂದಿದ್ದಾರೆ.ಆರೋಗ್ಯ ಕ್ಷೇತ್ರದಲ್ಲೂ ಉತ್ತಮ ಕೆಲಸ ಮಾಡುತ್ತಿದ್ದಾರೆ.ಬೆಂಗಳೂರಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯುವ ಮುಲಕ ಬೆಂಗಳೂರನ್ನ ಇನ್ನೂ ಉನ್ನತ ಸ್ಥಾನಕ್ಕೆ ತಗೆದುಕೊಂಡು ಹೋಗಿದ್ದಾರೆ. ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಂಸ್ಥೆಯನ್ನ ಸಿಎಂ ಬೊಮ್ಮಾಯಿ‌ ಹೊಗಳಿದರು.

Advertisement

ನಿರ್ಮಾಲನಂದ ಶ್ರೀಗಳು ಸಹ ಸಾಕಷ್ಟು ಉತ್ತಮ ಕೆಲಸ ಮಾಡ್ತಿದ್ದಾರೆ. ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಬಡವರ ಪರ ಕೆಲಸ‌ ಮಾಡ್ತಿದ್ದಾರೆ.ಇವತ್ತಿನ ದಿನಮಾನಗಳಲ್ಲಿ ನಾವು ವೈಜ್ಞಾನಿಕವಾಗಿ ಆಧ್ಯಾತ್ಮಿಕವಾಗಿ ಬಯಸುವ (we want scientific spiritually) ಗುರುಗಳು ಬೇಕು.ಆ ಗುರುಗಳು ನಮಗೆ ಸಿಕ್ಕಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next