Advertisement

ಆರೋಗ್ಯ ಉಪಕೇಂದ್ರ ಉದ್ಘಾಟನೆ

05:33 PM Jul 24, 2022 | Team Udayavani |

ಮಾನ್ವಿ: ಚಿಕಲಪರ್ವಿ ಗ್ರಾಮವು ತುಂಗಭದ್ರಾ ನದಿ ಪಾತ್ರದಲ್ಲಿ ಬರುವುದರಿಂದ ನೆರೆ ಹಾವಳಿಯ ಅಪಾಯ ಹೆಚ್ಚಾಗಿದೆ. ನವಗ್ರಾಮದಲ್ಲಿ ಸುರಕ್ಷಿತ ಸ್ಥಳದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಿಸಲಾಗಿದ್ದು, ಗ್ರಾಮದ ಜನರು ಹಾಗೂ ಸುತ್ತಲಿನ ಗ್ರಾಮಸ್ಥರು ಇದರ ಉಪಯೋಗ ಪಡೆಯಬೇಕು ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ತಿಳಿಸಿದರು.

Advertisement

ನವಗ್ರಾಮದಲ್ಲಿ ಎನ್‌ಎಚ್‌ಎಸ್‌ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಆರೋಗ್ಯ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗಂಭೀರ ಕಾಯಿಲೆ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಲು 25 ಲಕ್ಷ ರೂ. ವೆಚ್ಚದಲ್ಲಿ ಆಂಬ್ಯುಲೆನ್ಸ್‌ ಮಂಜೂರು ಮಾಡಲಾಗಿದೆ. ತಾಲೂಕಿನ ಉಪಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ತಾಲೂಕು ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್‌ ಸೇವೆ ಸೇರಿದಂತೆ ತಜ್ಞ ವೈದ್ಯರಿಂದ ಚಿಕಿತ್ಸೆ ಸೌಲಭ್ಯ ಹಾಗೂ ಉಚಿತ ಔಷಧಗಳನ್ನು ನೀಡಲಾಗುತ್ತಿದೆ. ಜನರು ಆರೋಗ್ಯ ಇಲಾಖೆಯ ಸೇವೆ ಪಡೆದು ಆರೋಗ್ಯವಂತರಾಗುವಂತೆ ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರಯ್ಯಸ್ವಾಮಿ ಮಾತನಾಡಿದರು. ಚಿಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮಿಗಳು, ಮೈಸೂರಿನ ನಿರಂಜನ ದೇವರು, ಅರಹಳ್ಳಿ ಮಠದ ಶರಣ ಬಸವ ಸ್ವಾಮಿಗಳು, ಡಾ| ರಾಜೇಂದ್ರ, ಆರೋಗ್ಯ ಇಲಾಖೆಯ ಬಾಲಪ್ಪ ನಾಯಕ, ರಾಜ್ಯ ಜೆಡಿಎಸ್‌ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ನಗರ ಘಟಕದ ಅಧ್ಯಕ್ಷ ಖಲೀಲ ಖುರೀಷಿ, ಮುಖಂಡರಾದ ಕೆ. ವೆಂಕಟೇಶ ನಾಯಕ, ಗ್ರಾಪಂ ಸದಸ್ಯರಾದ ಮರೇಗೌಡ ಬುದ್ದಿನ್ನಿ, ಚಂದ್ರಪ್ಪ ಗೌಡ, ಖಾಸಿಂ, ತಿಮ್ಮಣ್ಣ ಗೌಡ, ಪಿ.ರವಿಕುಮಾರ್‌, ಹನುಮಂತ ಭೋವಿ, ಆರ್‌ ಬಸವರಾಜ ಶೆಟ್ಟಿ, ಗೋಪಾಲ ನಾಯಕ, ಬುಡ್ಡಪ್ಪ ನಾಯಕ ಇದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next