ಮಂಡ್ಯ: ಮೈಷುಗರ್ ಕಾರ್ಖಾನೆಯ ಆಸ್ತಿಯ ಒಂದಿಂಚೂ ಜಾಗವನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಶಾಸಕ ಎಂ. ಶ್ರೀನಿವಾಸ್ ಹೇಳಿದರು.
ನಗರಸಭೆ ವತಿಯಿಂದ 2019-20ನೇ ಸಾಲಿನ 14ನೇ ಹಣಕಾಸಿನ ಅಂದಾಜು 12 ಲಕ್ಷ ರೂ. ವೆಚ್ಚದಲ್ಲಿ 15ನೇ ವಾರ್ಡ್ ಕುವೆಂಪು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಂಪನಿ ಜಾಗ ಅತ್ಯಮೂಲ್ಯ: ಮೈಷುಗರ್‌ಗೆ ಸೇರಿದ ಒಂದಿಂಚು ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡುವುದಕ್ಕೆ ಬಿಡುವುದಿಲ್ಲ. ಕಂಪನಿಗೆ ಸೇರಿದ ಜಾಗ ಅತ್ಯಮೂಲ್ಯ ಆಸ್ತಿ. ಅದನ್ನು ಉಳಿಸಿಕೊಳ್ಳುವುದು ನೌಕರರ ಕರ್ತವ್ಯ. ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವರೆಲ್ಲರೂ ಈಗಾಗಲೇ ಸ್ವಯಂ ನಿವೃತ್ತಿ ಪಡೆದು ಕರ್ತವ್ಯದಿಂದ ಬಿಡು ಗಡೆಯಾಗಿದ್ದಾರೆ. ಅವರಿಗೆ ಅಸೋಸಿ ಯೇಷನ್ ಹೆಸರಿನಲ್ಲಿ ಯಾವುದೇ ಅಧಿಕಾರ ಚಲಾಯಿಸುವ ಹಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿ ಕಾರಿಗೆ ಪತ್ರಬರೆದು ಮೈಷುಗರ್‌ಗೆ ಸೇರಿದ ಜಾಗವನ್ನು ಮೋಸ ಮಾಡಲು ಬಿಡುವುದಿಲ್ಲ ಎಂದರು.
ನೀರಿನ ಘಟಕ ಬಳಸಿಕೊಳ್ಳಿ: ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ದಿಂದ ಕುವೆಂಪು ನಗರದಲ್ಲಿ ನೀರಿನ ಘಟಕಸ್ಥಾಪನೆ ಮಾಡಲಾಗಿದೆ 5 ರೂ. 20 ಲೀಟರ್ ಶುದ್ಧ ಕುಡಿಯುವ ನೀರು ದೊರಕುತ್ತದೆಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ಮಶಾನಗಳ ಅಭಿವೃದ್ಧಿ: ನಗರದ ಕಲ್ಲಹಳ್ಳಿ, ಶಂಕರನಗರ, ಷುಗರ್‌ಟೌನ್, ಗುತ್ತಲು,ಯತ್ತ ಗದಹಳ್ಳಿ ರಸ್ತೆ ಸೇರಿದಂತೆ ನಾಲ್ಕು ಮೂಲೆ ಯಲ್ಲಿರುವ ನಾಲ್ಕು ಸ್ಮಶಾನಗಳನ್ನು ಅಭಿವೃದ್ಧಿಪಡಿಸಿ ಮಾದರಿ ಸ್ಮಶಾನಗಳನ್ನಾಗಿ ಮಾಡಲಾಗುವುದು. ಅಧಿಕಾರದ ಅವಧಿಯಲ್ಲಿ ಸಿಕ್ಕಂತಹ ಸಂದರ್ಭದಲ್ಲಿ ಕೆಲಸ ಮಾಡ ಬೇಕು ಎಂದು ಸಲಹೆ ನೀಡಿದರು.
ಜಿಪಂ ಸದಸ್ಯ ಎಚ್.ಎನ್.ಯೋಗೇಶ್, ನಗರಸಭಾ ಸದಸ್ಯರಾದ ವೈ.ಜೆ.ಮೀನಾಕ್ಷಿ ಪುಟ್ಟ ಸ್ವಾಮಿ, ಮಹದೇವು, ರವಿ, ಮುಖಂಡರಾದ ರಮೇಶ್, ಪುಟ್ಟಸ್ವಾಮಿ, ಶಿವರಾಮು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಪಿ. ಗೌರೀಶ್ ಹಾಜರಿದ್ದರು.
ಮಾದರಿ ನಗರ ಮಾಡಲು ಶ್ರಮ : ಮಂಡ್ಯ ನಗರ ಅಭಿವೃದ್ಧಿಪಡಿಸಿ ಮಾದರಿ ನಗರವನ್ನಾಗಿ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರ ಸ್ವಾಮಿ ಅವರು ಮಂಡ್ಯ ನಗರದ ಅಭಿ ವೃದ್ಧಿಗೆ 50 ಕೋಟಿ ರೂ. ಹಣವನ್ನು ಕೊಟ್ಟು ಅಭಿವೃದ್ಧಿಪಡಿಸಿದ್ದರು. ಇವೆಲ್ಲವೂ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಆಗಿ ಕೆಲಸ ನಡೆಯುತ್ತಿವೆ ಎಂದು ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.